ಹೊಸದಿಗಂತ ಡಿಜಿಟಲ್ ಡೆಸ್ಕ್:
75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಎಲ್ಲಡೆ ಮನೆ ಮಾಡಿದೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಒಟ್ಟು ಸೇರಿ ಏಕಕಾಲದಲ್ಲಿ 6 ದೇಶಭಕ್ತಿ ಗೀತೆಗಳನ್ನು ಒಟ್ಟಿಗೆ ಹಾಡಿ ವಿಶ್ವದಾಖಲೆ ಬರೆದಿದ್ದಾರೆ.
ಇಂದು ಬೆಳಗ್ಗೆ 10:15ರಿಂದ 10:40ರವರೆಗೆ ಈ ವಿಶಿಷ್ಠ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಭಾಗಿಯಾಗಿದ್ದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನ ಲಂಡನ್ ಪ್ರತಿನಿಧಿ ಪ್ರಥಮ್ ಭಲ್ಲಾ ಅವರು ಮುಖ್ಯಮಂತ್ರಿ ಅವರಿಗೆ ದೇಶಭಕ್ತಿ ಗೀತೆಗಳ ವಿಶ್ವ ದಾಖಲೆ ಪ್ರಮಾಣಪತ್ರ ಪ್ರತಿ ಹಸ್ತಾಂತರಿಸಿದರು.
67 ಸಾವಿರ ಸರ್ಕಾರಿ ಹಾಗೂ 50 ಸಾವಿರ ಖಾಸಗಿ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರಗೀತೆ, ವಂದೇ ಮಾತರಂ, ಸಾರೇ ಜಹಾನ್ ಸೇ ಅಚ್ಚಾ ಹಿಂದೂಸ್ತಾನ್ ಹಮಾರಾ, ಜನಗಣ ಮನ ಸೇರಿದಂತೆ ಆರು ದೇಶಭಕ್ತಿ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದ್ದಾರೆ.