ಹೊಸದಿಗಂತ ಡಿಜಿಟಲ್ ಡೆಸ್ಕ್
‘ಬಿಗ್ ಬಾಸ್ ಕನ್ನಡ OTT’ (Bigg Boss Kannada OTT) ಒಂದು ವಾರ ಪೂರೈಸಿದೆ. ಅದರಂತೆ ಬಿಗ್ ಬಾಸ್ ಮನೆಯಲ್ಲಿ ಮೊದಲ ಎಲಿಮಿನೇಷನ್ ಸಹ ನಡೆದಿದೆ ನಡೆದಿದೆ. ಪ್ರಬಲ ಸ್ಫರ್ಧಿಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದ ಕಿರಣ್ ಯೋಗೇಶ್ವರ್ ಅಚ್ಚರಿಯ ರೀತಿಯಲ್ಲಿ ಹೊರನಡೆದಿದ್ದಾರೆ. ರಾಜಸ್ಥಾನ ಮೂಲದ ಕಿರಣ್ಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ. ಅಲ್ಲದೆ ಅವರು ಇತರ ಸ್ಪರ್ಧಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಅವರಿಗೆ ಹಿನ್ನಡೆಯಾಗಿ ಕಾಡಿದೆ. ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಅತ್ಯಂತ ಕಡಿಮೆ ಮತ ಪಡೆದ ಅವರು ನಿರ್ಗಮಿಸಿದ್ದಾರೆ. ಮೊದಲ ವಾರದಲ್ಲೇ ಅವರ ಬಿಗ್ ಬಾಸ್ ಜರ್ನಿ ಅಂತ್ಯಗೊಂಡಿದೆ. ಆಗಸ್ಟ್ 13( ಶನಿವಾರ) ನಡೆದ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಕಿರಣ್ ಯೋಗೇಶ್ವರ್ ಅವರು ಎಲಿಮಿನೇಷನ್ ಆಗಿದ್ದಾರೆ ಎಂದು ಘೋಷಿಸಿದರು.
ಸೋನು ಶ್ರೀನಿವಾಸ್ ಗೌಡ ಸೇಫ್!
ಈ ವಾರ ಸೋನು ಶ್ರೀನಿವಾಸ್ ಗೌಡ ಸೇರಿದಂತೆ ಹಲವರು ನಾಮಿನೇಟ್ ಆಗಿದ್ದರು. ಆದರೆ ಅಂತಿಮವಾಗಿ ಕಿರಣ್ ಯೋಗೇಶ್ವರ್ ಎಲಿಮಿನೇಟ್ ಆಗಿದ್ದಾರೆ.
‘ಒಂದೇ ವಾರದಲ್ಲಿ ಎಲ್ಲರೊಂದಿಗೆ ಆತ್ಮೀಯಳಾಗಿದ್ದೆ. ನಾನು ನಿಮ್ಮೆಲ್ಲರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಈ ಮನೆಯನ್ನೂ ಮಿಸ್ ಮಾಡಿಕೊಳ್ಳುತ್ತೇನೆ ಎನ್ನುವ ಮೂಲಕ ಕಿರಣ್ ಯೋಗೇಶ್ವರ್ ಎಲ್ಲರಿಗೂ ವಿದಾಯ ಹೇಳಿದರು. ಬೇಸರವಿಲ್ಲದೆ ಮುಗುಳ್ನಗುತ್ತಲೇ ದೊಡ್ಮನೆಯಿಂದ ಹೊರಬಂದರು.
ಸನ್ಯಾ ಅಯ್ಯರ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಅರ್ಜುನ್ ರಮೇಶ್, ಉದಯ್ ಸೂರ್ಯ, ಶಿರ್ಷಾ ಗೌಡ, ಜಯಶ್ರೀ ಆರಾಧ್ಯ, ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್ ಈ ವಾರ ನಾಮಿನೇಟ್ ಆಗಿದ್ದರು. ಅತಿ ಕಡಿಮೆ ಮತ ಪಡೆದ ಕಿರಣ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಮೊದಲ ವಾರದ ಎಲಿಮಿನೇಷನ್ ಬಳಿಕ ಬಿಗ್ ಬಾಸ್ ಒಟಿಟಿ ಮನೆಯಲ್ಲಿ ಆಟ ಚುರುಕುಗೊಂಡಿದೆ. ಇತರ ಸ್ಪರ್ಧಿಗಳಿಗೆ ಈಗ ಟೆನ್ಶನ್ ಮತ್ತಷ್ಟು ಜಾಸ್ತಿಯಾಗಿದೆ. ಈ ಕಾರ್ಯಕ್ರಮಕ್ಕೆ ಸೋನು ಗೌಡ ಆಯ್ಕೆಯಾಗಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡ ಸರಿಯಾಗಿ ಬಾರದ ಕಾರಣ ಕೆಲ ವೀಕ್ಷಕರಿಗೆ ಜಶ್ವಂತ್ ವಿರುದ್ಧವೂ ಅಸಮಾಧಾನವಿದೆ. ಅಕ್ಷತಾ ಕುಕ್ಕಿಗೆ ಈ ವಾರ ಕೆಟ್ಟ ಹೆಸರು ಬಂದಿದೆ. ಅವರನ್ನೆಲ್ಲ ಬಿಟ್ಟು ಕಿರಣ್ ಯೋಗೇಶ್ವರ್ ಔಟ್ ಆಗಿದ್ದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ