ಎಸ್‌ಬಿಐ ಇಎಂಐ ಇನ್ಮೇಲೆ ದುಬಾರಿ- ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಪ್ರಮುಖ ಬ್ಯಾಂಕ್‌ ಗಳಲ್ಲೊಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇಎಂಐ, ಸಾಲದ ಮೇಲಿನ ಬಡ್ಡಿದರಗಳು ಇನ್ನುಮುಂದೆ ದುಬಾರಿಯಾಗಲಿದೆ. ಏಕೆಮದರೆ ಎಸ್‌ಬಿಐ ಸೋಮವಾರ ತನ್ನ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲ ದರವನ್ನು (ಎಂಸಿಎಲ್‌ಆರ್) 20 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇದು ಇಎಂಐಗಳನ್ನು ದುಬಾರಿಯಾಗಿಸುತ್ತದೆ.

ಲಭ್ಯವಿರುವ ಮಾಹಿತಿಯ ಪ್ರಕಾರ ಒಂದು ಆಧಾರ ಬಿಂದುವು ಶೇಕಡಾವಾರು ಬಿಂದುವಿನ ನೂರನೇ ಭಾಗಕ್ಕೆ ಸಮನಾಗಿರುತ್ತದೆ ಅಂದರೆ 20 ಪಾಯಿಂಟ್‌ ಎಸ್‌ಬಿಐ ಎಂಸಿಎಲ್‌ಆರ್ ಹೆಚ್ಚಳದಿಂದ ಸಾಲದ ಬಡ್ಡಿ ಶೇ.0.20ರಷ್ಟು ಹೆಚ್ಚಲಿದೆ. ಎಸ್‌ಬಿಐ ಪ್ರಕಾರ ಈ ಹೆಚ್ಚಳವು ಎಲ್ಲಾ ಅವಧಿಗಳಲ್ಲಿ ಜಾರಿಗೆ ಬರಲಿದೆ. ಹೆಚ್ಚಳವು ಆಗಸ್ಟ್ 15 ರಿಂದ ಜಾರಿಗೆ ಬಂದಿದೆ ಮತ್ತು ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಸಾಲಗಾರರಿಗೆ ಮನೆ, ಕಾರು ಮತ್ತು ಇತರ ಸಾಲಗಳ EMI ಗಳಲ್ಲಿ ಏರಿಕೆಯನ್ನು ನಿರಿಕ್ಷಿಸಬಹುದಾಗಿದೆ. ಪ್ರಸ್ತುತ ಒಂದು ವರ್ಷಕ್ಕೆ ಎಂಸಿಎಲ್‌ಆರ್ ದರವು 7.70% ದಷ್ಟಿದೆ.

ಏಪ್ರಿಲ್ 2022 ರಲ್ಲೂ ಎಸ್‌ಬಿಐ MCLR ಅನ್ನು ಹೆಚ್ಚಿಸಿದ್ದು ಇಲ್ಲಿಯವರೆಗೆ 70 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಏಪ್ರಿಲ್, ಮೇ ಮತ್ತು ಜುಲೈನಲ್ಲಿ, ಎಸ್‌ಬಿಐ ಎಂಸಿಎಲ್‌ಆರ್ ಅನ್ನು ತಲಾ 10 ಬಿಪಿಎಸ್ ಹೆಚ್ಚಿಸಿತ್ತು ಮತ್ತು ಜೂನ್‌ನಲ್ಲಿ ಎಂಸಿಎಲ್‌ಆರ್ ಅನ್ನು 20 ಬಿಪಿಎಸ್ ಹೆಚ್ಚಿಸಿದೆ. ಬ್ಯಾಂಕ್ ತನ್ನ ರೆಪೊ-ಲಿಂಕ್ಡ್ ಲೆಂಡಿಂಗ್ ದರ (RLLR) ಮತ್ತು ಬಾಹ್ಯ ಮಾನದಂಡದ ಸಾಲ ದರವನ್ನು (EBLR) 50 bps ನಿಂದ 7.65% ಗೆ ಹೆಚ್ಚಿಸಿದೆ.

ಏನಿದು ಎಂಸಿಎಲ್‌ಆರ್ ?
MCLR ಅಥವಾ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲ ದರವು ಬೆಂಚ್‌ಮಾರ್ಕ್ ಬಡ್ಡಿ ದರವಾಗಿದೆ, ಇದು ಬಡ್ಡಿದರದ ಕನಿಷ್ಠ ದರವಾಗಿದ್ದು, ಬ್ಯಾಂಕ್‌ಗಳು ತನ್ನ ಗ್ರಾಹಕರಿಗೆ ಸಾಲವನ್ನು ನೀಡಲು ಅನುಮತಿಸುತ್ತದೆ. ಇದನ್ನು 2016 ರಲ್ಲಿ RBI ಪರಿಚಯಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!