Wednesday, October 5, 2022

Latest Posts

ಹೃದಯಾಘಾತದಿಂದ ಚಲನಚಿತ್ರ ಯುವ ವಿಮರ್ಶಕ ಕೌಶಿಕ್‌ ನಿಧನ: ಕಾಲಿವುಡ್‌ನಲ್ಲಿ ವಿಷಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ವಿಮರ್ಶಕ ಮತ್ತು ಟ್ರ್ಯಾಕರ್ ಕೌಶಿಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 36ವರ್ಷಕ್ಕೇ ಕೌಶಿಕ್ ಮರಣ ಕಾಲಿವುಡ್‌ನಲ್ಲಿ ತೀವ್ರ ವಿಷಾದವನ್ನುಂಟುಮಾಡಿದೆ. ಕೌಶಿಕ್ ಸಾವಿನ ಬಗ್ಗೆ ಸಹ ವಿಮರ್ಶಕರು ಮತ್ತು ಚಿತ್ರರಂಗದ ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ.

ಕೌಶಿಕ್ ಅವರ ನಿಧನದ ಸುದ್ದಿಯು ಹೊಸ ಚಲನಚಿತ್ರಗಳ ವಿಮರ್ಶೆಗಾಗಿ ಅವರನ್ನು ಬಹಳ ಕಾಲದಿಂದ ಅನುಸರಿಸುತ್ತಿದ್ದ ಟ್ವಿಟರ್ ಬಳಕೆದಾರರಿಗೆ ಆಘಾತವಾಗಿದೆ. “ಸೀತಾರಾಮಂ” ಚಿತ್ರಕ್ಕೆ ಸಂಬಂಧಿಸಿದಂತೆ 7 ಗಂಟೆಗಳ ಹಿಂದೆ ಟ್ವೀಟ್ ಅನ್ನು ಸಹ ಅಪ್ಲೋಡ್ ಮಾಡಿದ್ದಾರೆ.  ಕೌಶಿಕ್ ಫಿಲ್ಮ್ ಎಂಟರ್ಟೈನ್ಮೆಂಟ್ ಟ್ರ್ಯಾಕರ್, ಇನ್ಫ್ಲುಯೆನ್ಸರ್, ಯೂಟ್ಯೂಬ್ ವಿಡಿಯೋ ಜಾಕಿ, ಫಿಲ್ಮ್ ವಿಮರ್ಶಕ, ಕ್ರಿಕೆಟ್ ಮತ್ತು ಟೆನಿಸ್ ಬಫ್ ಎಂದು ಗುರುತಿಸಲ್ಪಟ್ಟಿದ್ದಾರೆ. ಮೈಕ್ರೋ ಬ್ಲಾಗಿಂಗ್ ಸೋಶಿಯಲ್ ಮೀಡಿಯಾ ಸೈಟ್ 4 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಕೌಶಿಕ್ ನಿಧನಕ್ಕೆ ನಟ ದುಲ್ಕರ್‌, ವಿಜಯದೇವರಕೊಂಡ, ಸಹ ಚಿತ್ರ ಟ್ರ್ಯಾಕರ್‌ಗಳು, ಥಿಯೇಟರ್ ಮಾಲೀಕರು, ಗಣ್ಯರು ಮತ್ತು ಚಲನಚಿತ್ರ ವಿಮರ್ಶಕರು ಸಂತಾಪ ಸೂಚಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ಮರಣಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸಿನಿಮಾ ಮತ್ತು ರಾಜಕೀಯ ಗಣ್ಯರು ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಫಿಟ್ ನೆಸ್ ಕಾಯ್ದುಕೊಳ್ಳುವವರೂ ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ಬೇಸರ ತಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!