ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿರತೆ ಒಮ್ಮೆ ತನ್ನಬೇಟೆ ಮೇಲೆ ಕಣ್ಣಿಟ್ಟರೆ ಅದು ಎಲ್ಲಿದ್ರೂ, ಹೇಗಿದ್ರೂ ಬಿಡೋ ಮಾತೆ ಇಲ್ಲ. ಭಾರೀ ಹಸವಿನಿಂದ ಇತ್ತೋ ಏನೋ ಚಿರತೆ, ನೀರಿನಲ್ಲಿ ತೇಲುತ್ತಿದ್ದ ಮೊಸಳೆ ಹಿಡಿಯಲು ನದಿಗೆ ಹಾರಿ ದಡಕ್ಕೆ ಎಳೆದೊಯ್ದಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿವೆ.
ಟ್ವಿಟರ್‌ನಲ್ಲಿ ಕಾಣಿಸಿಕೊಂಡಿರುವ ಈ ವಿಡಿಯೋವನ್ನು ಫಿಗೆನ್ ಎಂಬ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ‘ಓ ಮೈ ಗಾಡ್.. ವಾಟ್ ಎ ಪವರ್’ ಎಂದು ಶೀರ್ಷಿಕೆ ನೀಡಿದ್ದಾರೆ.
OMG what a power!! pic.twitter.com/LHZazN2zwP
— Figen (@TheFigen) August 14, 2022