ಶೇಕಡಾ 11.76 ರಷ್ಟು ಏರಿಕೆಯಾಗಿದೆ ನಿಫ್ಟಿ ಬ್ಯಾಂಕ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೊಡ್ಡ ಬಂಡವಾಳವುಳ್ಳ ಭಾರತೀಯ ಬ್ಯಾಂಕಿಂಗ್ ಸ್ಟಾಕ್‌ಗಳನ್ನು ಒಳಗೊಂಡಿರುವ ನಿಫ್ಟಿ ಬ್ಯಾಂಕ್ ಈ ವರ್ಷದಲ್ಲಿ ಇದುವರೆಗೆ 11.76 ರಷ್ಟು ಏರಿಕೆಯಾಗಿದೆ. ಬ್ಯಾಂಕ್‌ಗಳ ದೃಢವಾದ ಗಳಿಕೆಯ ಬೆಳವಣಿಗೆ, ಜುಲೈನಿಂದ ಭಾರತೀಯ ಷೇರುಗಳಲ್ಲಿ ವಿದೇಶಿ ಹೂಡಿಕೆದಾರರ ಹಿಂತಿರುಗುವಿಕೆ ಮತ್ತು ಆಕರ್ಷಕ ಮೌಲ್ಯಮಾಪನಗಳು ಈ ಏರಿಕೆಗೆ ಕಾರಣವಾದ ಸಂಗತಿಗಳು.

ಪ್ರಸ್ತುತ, ನಿಫ್ಟಿ ಬ್ಯಾಂಕ್ ಸೂಚ್ಯಂಕವು 39,656.15 ನಲ್ಲಿ ವಹಿವಾಟು ನಡೆಸುತ್ತಿದೆ. ಇದು ಕಳೆದ ವರ್ಷ ಡಿಸೆಂಬರ್ 31ಕ್ಕೆ ಹೋಲಿಸಿದರೆ 35,481.70 ಅಂಕಗಳಲ್ಲಿತ್ತು. ವರದಿಗಳ ಪ್ರಕಾರ ಬ್ಯಾಂಕ್ ಆಫ್ ಬರೋಡಾ ಶೇ.47.90ರಷ್ಟು, ಫೆಡರಲ್ ಬ್ಯಾಂಕ್ 21.20 ಪ್ರತಿಶತ ಹಾಗೂ ಇಂಡಸ್‌ಇಂಡ್ ಬ್ಯಾಂಕ್ ಶೇ. 21.10ರಷ್ಟು ಆದಾಯ ಗಳಿಸಿವೆ.

ಗುರುವಾರದ ನಿಫ್ಟಿ ಬ್ಯಾಂಕ್‌ ಸೂಚ್ಯಂಕದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್, ಬಂಧನ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಪಿಎನ್‌ಬಿ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಗಳು ಸ್ಥಾನ ಪಡೆದಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!