ರಷ್ಯಾದಲ್ಲಿ ಸಿಕ್ಕಿಬಿದ್ದ ಐಸಿಸ್ ಉಗ್ರನಿಗೆ ನೂಪುರ್‌ ಶರ್ಮಾ ಹತ್ಯೆಗೈಯ್ಯುವ ಟಾರ್ಗೆಟ್‌; ಹೊರಬಿತ್ತು ಸ್ಫೋಟಕ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
‌ರಷ್ಯಾದಲ್ಲಿ ಸೆರೆಸಿಕ್ಕ ಆತ್ಮಾಹುತಿ ಬಾಂಬರ್ ಗೆ ಐಸಿಸ್ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಟಾರ್ಗೆಟ್‌ ವಹಿಸಿತು ಎಂಬ ಸ್ಫೋಟಕ ವಿಚಾರ ಬಯಲಾಗಿದೆ.
ಪ್ರವಾದಿ ಕುರಿತಾಗಿ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಕಾರ್ಯವನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಆತ್ಮಹತ್ಯಾ ಬಾಂಬರ್ ಅಜಮೊವ್ ಎಂಬುವವನನ್ನು ಬಂಧಿಸಿದೆ. ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಪ್ರಕಾರ, ಅಜಮೊವ್ ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ಟರ್ಕಿಯಲ್ಲಿ ಆತ್ಮಾಹುತಿ ಬಾಂಬರ್ ಆಗಿ ಐಎಸ್‌ನಿಂದ ನೇಮಕಗೊಂಡಿದ್ದ. ಟರ್ಕಿಯಲ್ಲಿ ಆತ ತರಬೇತಿ ಪಡೆದಿದ್ದ. ಯೋಜನೆಯ ಭಾಗವಾಗಿ, ಭಾರತೀಯ ವೀಸಾ ಪಡೆಯಲು ಆತನನ್ನು ರಷ್ಯಾಕ್ಕೆ ಕಳುಹಿಸಲಾಯಿತು. ನೂಪುರ್‌ ಮೇಲಿನ ದಾಳಿಗೆ ಅಗತ್ಯವಿದ್ದ ನಿಧಿಯನ್ನು ಐಎಸ್ ಕಾಶ್ಮೀರಕ್ಕೂ ತಲುಪಿಸಿತ್ತು.
ಆರೋಪಿಯ ಟೆಲಿಗ್ರಾಮ್ ಮೆಸೆಂಜರ್ ಖಾತೆಗಳ ಮೂಲಕ ಮತ್ತು ಇಸ್ತಾನ್‌ಬುಲ್‌ನಲ್ಲಿ ಐಎಸ್ ಪ್ರತಿನಿಧಿಯೊಂದಿಗೆ ನಡೆಸಿದ ವೈಯಕ್ತಿಕ ಸಭೆಗಳ ಮೂಲಕ ಭಯೋತ್ಪಾದಕರ ಸೈದ್ಧಾಂತಿಕ ಸಂಚನ್ನುನಿಖಟವಾಗಿ ಗಮನಿಸಲಾಗುತ್ತಿತ್ತು ಎಂದು ಎಫ್‌ಎಸ್‌ಬಿ ಹೇಳಿದೆ. ಭಯೋತ್ಪಾದಕನು ರಷ್ಯಾಕ್ಕೆ ತೆರಳುವ ಮೊದಲು, ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿ ಮತ್ತು ಭಾರತಕ್ಕೆ ತೆರಳುವ ಮುನ್ನ ತಾನು ನೂಪುರ್‌ ಹತ್ಯೆಗೈದು ಬರುವುದಾಗಿ ಐಎಸ್ ಮುಖ್ಯಸ್ಥನಿಗೆ ಪ್ರಮಾಣ ಮಾಡಿದ್ದ ಎಂಬ ವಿಚಾರವನ್ನು ಎಫ್‌ಎಸ್‌ಬಿ ಗಮನಿಸಿದೆ.
ಭಾರತದ ಗೃಹ ಸಚಿವಾಲಯವು ಪ್ರಸ್ತುತ ಪರಿಸ್ಥಿತಿಯನ್ನು ಟ್ರ್ಯಾಕ್ ಮಾಡುತ್ತಿದೆ ಮತ್ತು ಸಂಬಂಧಿತ ಏಜೆನ್ಸಿಗಳಿಂದ ಸೈಬರ್‌ಸ್ಪೇಸ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!