ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಚ್ಚರಿಯಾದರೂ ಇದು ಸತ್ಯ! ಮುಂಬೈನಲ್ಲಿ ಕಳೆದ 2018ರಿಂದ ಈವರೆಗೆ ಸುಮಾರು 3 ಲಕ್ಷ ಮಂದಿಗೆ ಬೀದಿ ನಾಯಿಗಳು ಕಡಿದಿವೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಏಕನಾಥ ಶಿಂಧೆ ಸಂಪುಟ ಸಭೆಗೆ ತಿಳಿಸಿದ್ದಾರೆ. ಸಂಪುಟ ಸಭೆಯಲ್ಲಿ ಬುಧವಾರ ಬಿಜೆಪಿ ಶಾಸಕ ಪ್ರಸಾದ್ ಲಾಡ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2018ರಿಂದ 2022ರ ಮಾರ್ಚ್‌ವರೆಗೆ 3,07,652ಮಂದಿ ಬೀದಿ ನಾಯಿಗಳ ಕಡಿತಕ್ಕೊಳಗಾಗಿದ್ದಾರೆ.
ಬೃಹತ್‌ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ (ಬಿಎಮ್‌ಸಿ) ವತಿಯಿಂದ 145 ಕೇಂದ್ರಗಳಲ್ಲಿ ರೇಬಿಸ್‌ಗೆ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ವಿವರಿಸಿದರು. ನಗರದಲ್ಲಿ ಚಚ್ಚುಮದ್ದು ಕೇಂದ್ರಗಳನ್ನು ಹೆಚ್ಚಿಸುವ ಕುರಿತು ಬಿಎಮ್‌ಸಿ ಯೋಚಿಸುತ್ತಿದೆ. 1994ರಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕಾಗಿ ಬಿಎಮ್‌ಸಿ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಮಸೀದಿ ಬಂಡ್, ಮುಲುಂದ್ ಬಾಂದ್ರಾ ಮತ್ತು ಮಲಾಡ್‌ನಲ್ಲಿ ಬೀದಿ ನಾಯಿಗಳ ದೂರು ಸ್ವೀಕಾರ ಕೇಂದ್ರಗಳನ್ನು ಕಾರ್ಯನಿರ್ವಹಿಸುತ್ತಿವೆ ಎಂದು ಏಕನಾಥ ಶಿಂಧೆ ಹೇಳಿದರು.