ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಸಾವಿಗೆ ಸಂಬಂಧಿಸಿದಂತೆ ಕ್ಲಬ್ ಮಾಲೀಕ ಹಾಗೂ ಡ್ರಗ್ ಪೆಡ್ಲರ್ ಇಬ್ಬರನ್ನು ಪೋಲೀಸರು ಬಂಧಿಸಿದ್ದು ಕ್ಲಬ್ ನ ವಾಶ್ ರೂಮಿನಿಂದ ಪೋಲೀಸರು ಡ್ರಗ್ಸ್ ಅನ್ನು ವಶಪಡಿಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಸೋನಾಲಿ ಫೋಗಟ್ ಮಾದಕ ದ್ರವ್ಯ ಸೇವಿಸಿದ್ದಾರೆ ಎಂದು ಶುಕ್ರವಾರ ಗೋವಾ ಪೊಲೀಸರು ಹೇಳಿದ್ದಾರೆ. ಅಲ್ಲದೇ ಪೋಗಟ್ ಅವರು ಪಬ್ ನೊಳಗೆ ಕುಂಟುತ್ತಿರುವ ದೃಶ್ಯಾವಳಿಗಳನ್ನು ಸಿಸಿಟಿವಿ ದೃಶ್ಯಾವಳಿಗಳು ತೆರೆದಿಟ್ಟಿವೆ ಎನ್ನಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಾಲಿ ಫೋಗಟ್ ಅವರ ಇಬ್ಬರು ಸಹಾಯಕರಾದ ಸುಧೀರ್ ಸಾಂಗ್ವಾನ್ ಮತ್ತು ಸುಖವಿಂದರ್ ವಾಸಿ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಭಾರತದಲ್ಲಿ ಪ್ರಸ್ತುತ ನಿಷೇಧಗೊಂಡಿರುವ ಟಿಕ್-ಟಾಕ್ ನಲ್ಲಿ ಸೋನಾಲಿ ಪೋಗಟ್ ಖ್ಯಾತಿಗಳಿಸಿದ್ದರು. ಆಗಸ್ಟ್ 23 ರಂದು ಬೆಳಿಗ್ಗೆ ಉತ್ತರ ಗೋವಾದಲ್ಲಿ ಅವರು ಸಾವನ್ನಪ್ಪಿದ್ದರು. ಪ್ರಾಥಮಿಕ ಶೋಧನೆಯಲ್ಲಿ ಹೃದಯಾಘಾತದಿಂದ ಆಕೆ ಸಾವನ್ನಪ್ಪಿದ್ದಾರೆ ಎಂಬುದು ಪತ್ತೆಯಾಗಿತ್ತು. ಪ್ರಸ್ತುತ ಅವರ ಸಾವಿನ ಕುರಿತು ತನಿಖೆ ನಡೆಸಲಾಗುತ್ತಿದೆ.