ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆ ಬೆನ್ನಲ್ಲೇ ಆಯ್ಕೆ ಕುರಿತು ಹಲವು ಹೆಸರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಮಾತನಾಡಿರುವ ಮಾಡಿರುವುದು ಸಂಸದ ಶಶಿ ತರೂರ್, ಒಳ್ಳೆಯ ವಿಚಾರ. ನಾನು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಸ್ಪರ್ಧೆಗೆ ಕೆಲವು ವಾರಗಳು ಬಾಕಿ ಇವೆ. ಸ್ವಲ್ಪ ಸಮಯ ಕಾದು ನೋಡೋಣ ಎಂದು ಹೇಳಿದರು.
ಜನರು ತಮಗೆ ಬಂದ ರೀತಿಯಲ್ಲಿ ಊಹಾಪೋಹ ಹರಡುವ ಅಧಿಕಾರ, ಸ್ವಾತಂತ್ರ್ಯ ಹೊಂದಿದ್ದಾರೆ. ಪಕ್ಷದಲ್ಲಿ ಚುನಾವಣೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಇದನ್ನು ನಾನು ನನ್ನ ಲೇಖನದಲ್ಲಿ ಉಲ್ಲೇಖಿಸಿದ್ದೇನೆ. ಆದರೆ, ಸ್ಪರ್ಧಿಸುವ ಮಾಡುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ ಎಂದರು.
ನನಗೆ ಎಲ್ಲ ಆಯ್ಕೆಗಳು ಮುಕ್ತವಾಗಿವೆ. ನಾನು ಲೋಕಸಭೆ ಸಂಸದ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ತಿಳಿದುಕೊಂಡಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆ ಮುಕ್ತ ಮತ್ತು ನ್ಯಾಯಯುತವಾಗಿ ನಡೆಯಬೇಕೆಂದು ಶಶಿ ತರೂರ್ ಈಗಾಗಗಲೇ ಮನವಿ ಮಾಡಿದ್ದಾರೆ.