ದೇಶವನ್ನು ಹಿಂದುಸ್ಥಾನವನ್ನಾಗಿ ಮಾಡಿದ್ದು ಮೊಘಲರು: ಕಾಂಗ್ರೆಸ್‌ ನಾಯಕನ ವಿವಾದಿತ ಹೇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ದೇಶವನ್ನು ಒಟ್ಟುಗೂಡಿಸಿ ಹಿಂದೂಸ್ತಾನವನ್ನಾಗಿ ಮಾಡಿದ್ದು ಮೊಘಲರು, ಅದಕ್ಕಾಗಿ ಅವರ ಬಗ್ಗೆ ಹೆಮ್ಮೆ ಇದೆ ಎಂದು ಕಾಂಗ್ರೆಸ್‌ ನಾಯಕ ಅಸ್ಸಾಂನ ಬಾರ್ಪೇಟಾ ಕ್ಷೇತ್ರದ ಸಂಸದ ಅಬ್ದುಲ್‌ ಖಾಲಿಕ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

ಭಾರತವನ್ನು ಹಿಂದೂಸ್ತಾನದ ರೂಪದಲ್ಲಿ ನೀಡಿದ್ದು ಮೊಘಲರು. ಅದಕ್ಕೂ ಮುನ್ನ ಭಾರತವು ಬಿಡಿ ಬಿಡಿ ರಾಜ್ಯಗಳಾಗಿ ವಿಭಜನೆಯಾಗಿತ್ತು. ಆದ್ದರಿಂದ ನಾನು ಮೊಘಲರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

ನಾನು ಮೊಘಲನೂ ಅಲ್ಲ. ಅವರ ವಂಶಸ್ಥನೂ ಅಲ್ಲ. ಆದರೆ, ಮೊಘಲರು ಏಕ್‌ ಹಿಂದೂಸ್ತಾನವನ್ನು ನೀಡಿದ್ದಾರೆ. ಮೊಘಲರು ಈ ದೇಶವನ್ನು ಆಳದೇ ಇದ್ದಿದ್ದರೆ, ಅವರ ಹೋರಾಟಗಳು ಇಲ್ಲದೇ ಇದ್ದಿದ್ದರೆ, ನಮ್ಮ ಸ್ವಾತಂತ್ರ್ಯ ಹೋರಾಟ ಅಪೂರ್ಣವಾಗುತ್ತಿತ್ತು ಎಂದು ಹೇಳಿದ್ದಾರೆ.

ಅದಲ್ಲದೆ, ದೇಶದಲ್ಲಿ ನಾವು ಹೆಮ್ಮೆ ಎಂದು ಹೇಳಿಕೊಳ್ಳುವ ಎಲ್ಲಾ ಸ್ಮಾರಕಗಳನ್ನು ಕಟ್ಟಿದ್ದು ಮೊಘಲರು. ಅದು ಕೆಂಪುಕೋಟೆಯೇ ಇರಬಹುದು, ತಾಜ್‌ ಮಹಲೇ ಇರಬಹುದು. ಇದನ್ನು ಕಟ್ಟಿರುವುದು ಮೊಘಲರು ಎಂದಿದ್ದಾರೆ.

ಭಾರತದಲ್ಲಿ ಕೆಂಪು ಕೋಟೆ ಮತ್ತು ತಾಜ್ ಮಹಲ್‌ನಂತಹ ಸ್ಮಾರಕಗಳನ್ನು ಮೊಘಲರು ನಿರ್ಮಿಸಿದ್ದಾರೆ ಮತ್ತು ಆದ್ದರಿಂದ ದೇಶಕ್ಕೆ ಅವರ ಕೊಡುಗೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ದೇಶದ ಪ್ರತಿ ಪ್ರಧಾನಿಕೂಡ ರಾಷ್ಟ್ರ ಧ್ವಜವನ್ನು ಕೆಂಪುಕೋಟೆಯಿಂದಲೇ ಹಾರಿಸಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮೊಘಲರ ಕೊಡುಗೆ ಎಷ್ಟಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದಿದ್ದಾರೆ.

ನಾವು ಮೊಘಲರನ್ನು ತುಂಬಾ ದ್ವೇಷಿಸುವುದಾದರೆ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!