ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಯುರೋಪ್‌ನಲ್ಲಿ ಗಂಬೀರ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದೆ. ರಷ್ಯಾ ಮೇಲೆ ಉಕ್ರೇನ್ ಸಮರ ಸಾರಿದಾಗ ಬಹುತೇಕ ಯೂರೋಪಿಯನ್ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದ್ದವು. ಇದಕ್ಕೆ ಪ್ರತಿಕಾರ ಕ್ರಮವಾಗಿ ರಷ್ಯಾ ಯೂರೋಪಿಯನ್ ರಾಷ್ಟ್ರಗಳಿಗೆ ನೈಸರ್ಗಿಕ ಅನಿಲದ ಪೂರೈಕೆಯನ್ನು ತಡೆಹಿಡಿದಿದೆ. ಆದ್ದರಿಂದ ಅಲ್ಲಿನ ರಾಷ್ಟ್ರಗಳ ನೈಸರ್ಗಿಕ ಅನಿಲ ಸಂಗ್ರಹಾಗಾರದಲ್ಲಿ ಅತ್ಯಂತ ಕಡಿಮೆ ಅನಿಲ ಸಂಗ್ರಹವಿದೆ. ಚಳಿಗಾಲದ ಸಂದರ್ಭದಲ್ಲಿ ಅನಿಲ ವ್ಯತ್ಯಯದಿಂದ ಸಂಕಷ್ಟಕ್ಕೀಡಾಗಿರುವ ಜರ್ಮನಿಯು, ದೇಶದಲ್ಲಿ ಹೆಚ್ಚುತ್ತಿರುವ ಇಂಧನ ವೆಚ್ಚಗಳನ್ನು ಸರಿದೂಗಿಸುವ ಕ್ರಮದ ಭಾಗವಾಗಿ 65 ಬಿಲಿಯನ್ ಡಾಲರ್ ಪ್ಯಾಕೇಜ್ ಅನ್ನು ಘೋಷಿಸಿದೆ.
ನೈಸರ್ಗಿಕ ಅನಿಲ ಕೊರತೆ ಪರಿಸ್ಥಿತಿಯನ್ನು ಸರಿದಾರಿಗೆ ತರಲು ಜರ್ಮನಿ ಈ ಹಿಂದೆ ಘೋಷಿಸಿದ್ದ ಎರಡು ಪ್ಯಾಕೇಜ್‌ಗಳಿಗಿಂತ ಇದು ದೊಡ್ಡದಾದ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್ ತೆರಿಗೆ ವಿನಾಯಿತಿ ಘೋಷಣೆಗಳನ್ನು ಒಳಗೊಂಡಿದೆ. ಗಗನಕ್ಕೇರುತ್ತಿರುವ ಇಂಧನ ಬೆಲೆಗಳನ್ನು ನಿರ್ವಹಿಸಲು ಜನರು ಮತ್ತು ಕಂಪನಿಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ