Saturday, October 1, 2022

Latest Posts

ಚಿಲಿಕಾ ಸರೋವರದಲ್ಲಿ ಮುಳುಗಿದ ದೋಣಿ: ಇಬ್ಬರ ಸಾವು

ಹೊಸದಿಗಂತ ಡಡಿಜಿಟಲ್‌ ಡೆಸ್ಕ್:
ಒಡಿಶಾದ ಪುರಿ ಜಿಲ್ಲೆಯಲ್ಲಿ ಚಿಲಿಕಾ ಸರೋವರದಲ್ಲಿ ನಾಡ ದೋಣಿಯೊಂದು ಮುಳುಗಿದ್ದು ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಚಿಲ್ಕಾ ಸರೋವರದ ಕಲಿಜೈಕುಡ ಎಂಬ ದ್ವೀಪದಿಂದ ಹಿಂದಿರುಗುತ್ತಿದ್ದ ಜನರ ಗುಂಪು ಭಾರೀ ಮಳೆ ಮತ್ತು ಬಲವಾದ ಗಾಳಿಯ ನಡುವೆ ತೀರದಿಂದ ಕೇವಲ 3 ಕಿಮೀ ದೂರದಲ್ಲಿರುವಾಗ ಗಾಳಿಯ ಹೊಡೆತಕ್ಕೆ ಸಿಲುಕಿದ ದೋಣಿ ಮುಗುಚಿದ ಪರಿಣಾಮ ಜನರು ನೀರುಪಾಲಾಗಿದ್ದಾರೆ.

ದೋಣಿ ಮಗುಚಿದ ನಂತರ ಕನಿಷ್ಠ 10ಜನರನ್ನು ರಕ್ಷಿಸಲಾಗಿದ್ದು ಮೂವರು ನಾಪತ್ತೆಯಾಗಿದ್ದಾರೆ, ಆದರೆ ಅವರಲ್ಲಿ ಒಬ್ಬರು ಈಜಿ ದಡಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಶವಗಳನ್ನು ಹೊರತೆಗೆದಿದ್ದು ಅವರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳ ವರದಿ ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!