ಹೊಸದಿಗಂತ ಡಿಜಿಟಲ್ ಡೆಸ್ಕ್
55 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಗಂಗಾ ನದಿಯಲ್ಲಿ ಮುಳುಗಿದ ಅಘಾತಕಾರಿ ಘಟನೆ ಸೋಮವಾರ ಬೆಳಗ್ಗೆ ಬಿಹಾರದ ಪಾಟ್ನಾ ಸಮೀಪವಿರುವ ದಾನಾಪುರದ ಶಾಪುರ್ ಪಿಎಸ್ ಪ್ರದೇಶದ ಬಳಿ ಸಂಭವಿಸಿದೆ.
ಅಧಿಕಾರಿಗಳ ಪ್ರಕಾರ, ದೋಣಿಯಲ್ಲಿ ಸುಮಾರು 50-54 ಜನರು ಇದ್ದರು ಅವರಲ್ಲಿ ಸುಮಾರು 10 ಜನರು ನಾಪತ್ತೆಯಾಗಿದ್ದಾರೆ ಎಂದು ತೀಲಿದುಬಂದಿದೆ. ನಾಪತ್ತೆಯಾದವರ ಪತ್ತೆಗೆ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ.
ದೋಣಿಯಲ್ಲಿದ್ದ ಎಲ್ಲಾ ವ್ಯಕ್ತಿಗಳು ಪಾಟ್ನಾದ ದೌದ್‌ಪುರ ಪ್ರದೇಶದಿಂದ ಬಂದವರು. ಇಲ್ಲಿನ ಕಾರ್ಮಿಕರು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಕ್ಷಣೆಗಾಗಿ ಎರಡು ದೋಣಿಗಳನ್ನು ಕಳುಹಿಸಲಾಗಿದೆ. ಘಟನೆಯ ಬಗ್ಗೆ ಎನ್‌ಡಿಆರ್‌ಎಫ್ ತಂಡಕ್ಕೆ ಮಾಹಿತಿ ನೀಡಲಾಗಿದೆ ಎಂದು ಎಸ್‌ಡಿಎಂ ಡಣಾಪುರ ತಿಳಿಸಿದ್ದಾರೆ.
ದೋಣಿ ಮುಳುಗಿದ ಸುದ್ದಿ ಹರಡಿದ ಕೂಡಲೇ ಜನರು ನದಿಯ ಸುತ್ತಲೂ ಜಮಾಯಿಸಿದರು. ಮುಳುಗುಗಾರರ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವರೆಗೆ ಯಾವುದೇ ಪ್ರಯಾಣಿಕ ಸಾವನ್ನಪ್ಪಿರುವ ಮಾಹಿತಿ ತಿಳಿದುಬಂದಿಲ್ಲ. ಈ ವಿಚಾರವಾಗಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ