Thursday, September 29, 2022

Latest Posts

ಧರೆಗುರುಳಿದ ಜೈಂಟ್‌ ವೀಲ್‌ : 10 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾನುವಾರ ಸಂಜೆ ಪಂಜಾಬಿನ ಮೊಹಾಲಿಯಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು ಮನರಂಜನೆಗಾಗಿ ಜೈಂಟ್‌ ವೀಲ್‌ ಹತ್ತಿದವರೆಲ್ಲ ಸಾವಿನದವಡೆಯಿಂದ ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ.

ಪಂಜಾಬ್‌ ನ ಮೊಹಾಲಿಯ 8ನೇ ಹಂತದಲ್ಲಿರುವ ದಸರಾ ಮೈದಾನದಲ್ಲಿ ಎತ್ತರದ ಸ್ಪಿನ್ನಿಂಗ್‌ ಜಾಯ್‌ರೈಡ್‌ ಮುರಿದು ಬಿದ್ದ ಪರಿಣಾಮ ಜಾಯ್‌ ರೈಡ್‌ ನಲ್ಲಿದ್ದ ಮಕ್ಕಳು ಸೇರಿದಂತೆ ಕನಿಷ್ಠ 10 ಜನರು ಗಂಭೀರವಾಗಿ ಗಾಯಗೊಂಡಿದ್ದು ಉಳಿದವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮೊಹಾಲಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭಾನುವಾರ ರಜೆ ಇದ್ದ ಕಾರಣ ಜಾತ್ರೆಯಲ್ಲಿ ಜನ ನೂಕುನುಗ್ಗಲು ಉಂಟಾಗಿತ್ತು. ಜಾಯ್‌ ರೈಡ್‌ ಕೂಡ ಭರ್ತಿಯಾಗಿತ್ತು ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!