ರಾಜ್ಯ ಚುನಾವಣಾ ಅಖಾಡದಲ್ಲಿ ಬಿಜೆಪಿ: ಕರ್ನಾಟಕ ಪ್ರವಾಸಕ್ಕೆ ರೆಡಿಯಾಯಿತು 2 ತಂಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದ್ದು, ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮೋದಿ ಸೇರಿದಂತೆ ಹೈಕಮಾಂಡ್ ನಾಯಕರು ಪಣ ತೊಟ್ಟಿದ್ದಾರೆ.

ಕಾರ್ಯಕರ್ತರಲ್ಲಿ ಚುನಾವಣೆ ಉತ್ಸಹ ತುಂಬುವ ಬಿಜೆಪಿ ಕೆಲಸಮಾಡುತ್ತಿದ್ದು, ಮೊನ್ನೇ ಅಷ್ಟೇ ಮೋದಿ ಮಂಗಳೂರಿಗೆ ಬಂದು ಹೋದ ಬೆನ್ನಲ್ಲೇ ಕೇಸರಿ ಪಾಳೆಯದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ.

ಇದಕ್ಕೆ ಪೂಕರವೆಂಬಂತೆ ಕರ್ನಾಟಕ ಪ್ರವಾಸ ಮಾಡಲು ಬಿಜೆಪಿ ನಾಯಕ ತಂಡ ರಚನೆಯಾಗಿದೆ. ಎರಡು ತಂಡಗಳಲ್ಲಿ ರಾಜ್ಯ ಪ್ರವಾಸಕ್ಕೆ ತಂಡ ರೆಡಿಯಾಗಿದ್ದು, ಕ್ಷೇತ್ರದಲ್ಲಿ ನಾಯಕರ ಪ್ರವಾಸದ ಪಟ್ಟಿ ಪ್ರಕಟವಾಗಿದೆ.

ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಒಂದು ತಂಡ ರಚನೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮತ್ತೊಂದು ತಂಡ ಪ್ರವಾಸಕ್ಕೆ ತಯಾರಿ ನಡೆಸಿದೆ.

ಬೊಮ್ಮಾಯಿ-ಯಡಿಯೂರಪ್ಪ ನೇತೃತ್ವದ ತಂಡದ ಪ್ರವಾಸ 
ರಾಯಚೂರು ನಗರ, ದೇವದುರ್ಗ , ಮಸ್ಕಿ, ಕುಷ್ಟಗಿ, ಹಗರಿಬೊಮ್ಮನಹಳ್ಳಿ, ಶಿರುಗಪ್ಪ, ಅರಸೀಕೆರೆ , ಸಕಲೇಶಪುರ, ಹುಣಸೂರು, ಮೈಸೂರು ನಗರ, ಮದ್ದೂರು, ಕೆಆರ್ ಪೇಟೆ, ಮಾಗಡಿ, ಕೊಳ್ಳೆಗಾಲ, ಚಾಮರಾಜನಗರ, ಹುಮ್ನಬಾದ್, ಔರದ್.

ಸುರಪುರ, ಸೇಡಂ, ಚಿತ್ತಾಪುರ, ಆಳಂದ, ನಿಪ್ಪಾಣಿ, ರಾಯಭಾಗ, ಬಾದಾಮಿ, ತೆರೇದಾಳ, ಶಿರಹಟ್ಟಿ, ಕುಂದಗೋಳ, ಹಾನಗಲ್, ಬ್ಯಾಡಗಿ, ಬೆಳಗಾವಿ ಉತ್ತರ, ಹಳಿಯಾಳ, ತರೀಕೆರೆ, ಸೊರಬ, ಬೈಂದೂರು, ಕಾಪು, ಶೃಂಗೇರಿ, ಪುತ್ತೂರು, ಜಗಳೂರು, ಹರಿಹರ, ಹೊಳಲ್ಕೆರೆ, ಶಿರಾ, ತುಮಕೂರು ನಗರ, ತುರುವೇಕೆರೆ, ಕೆಜೆಎಫ್, ಮಾಲೂರು, ಬ್ಯಾಟರಾಯನಪುರ, ಗೌರಿಬಿದನೂರು, ಗಾಂಧಿನಗರ, ಬೆಂ ದಕ್ಷಿಣ, ಆನೇಕಲ್, ಮುದ್ದೇಬಿಹಾಳ, ದೇವರಹಿಪ್ಪರಗಿ

ನಳೀನ್ ಕುಮಾರ್ ಕಟೀಲ್ ನೇತೃತ್ವದ ತಂಡದ ಪ್ರವಾಸ
ಕೃಷ್ಣರಾಜ, ನಂಜನಗೂಡು, ಹನೂರು, ಗುಂಡ್ಲುಪೇಟೆ, ಮಂಡ್ಯ, ಶ್ರೀರಂಗಪಟ್ಟಣ, ಹಾಸನ, ಬೇಲೂರು, ಮೂಡಿಗೆರೆ, ಶಿವಮೊಗ್ಗ ಗ್ರಾಮಾಂತರ, ಭಟ್ಕಳ, ಕಾರವಾರ, ಹು-ಧಾ ಪಶ್ಚಿಮ, ರಾಣಿಬೆನ್ನೂರು, ಕಲಘಟಗಿ, ನವಲಗುಂದ, ರೋಣ, ಸವದತ್ತಿ ಯಲ್ಲಮ್ಮ, ಗೋಕಾಕ, ರಾಮದುರ್ಗ. ಕಾಗವಾಡ

ಜಮಖಂಡಿ, ಹುನಗುಂದ, ಬಸವನಬಾಗೇವಾಡಿ. ನಾಗಠಾಣ, ಬಸವಕಲ್ಯಾಣ, ಭಾಲ್ಕಿ, ಅಫಜಲಪುರ, ಕಲಬುರಗಿ ಗ್ರಾಮಾಂತರ, ಯಾದಗಿರಿ, ಲಿಂಗಸಗೂರು, ಗಂಗಾವತಿ, ಕಂಪ್ಲಿ, ಹರಪ್ಪನಹಳ್ಳಿ, ಕೂಡ್ಲಿಗಿ , ದಾವಣಗೆರೆ ದಕ್ಷಿಣ. ಚೆನ್ನಗಿರಿ, ಹಿರಿಯೂರು, ತಿಪಟೂರು, ಮಧುಗಿರಿ

ದಾಸರಹಳ್ಳಿ, ಯಲಹಂಕ, ಕೆ ಆರ್ ಪುರಂ, ರಾಜಾಜಿನಗರ, ರಾಜ ರಾಜೇಶ್ವರಿ ನಗರ. ಗೋವಿಂದ ರಾಜ ನಗರ. ಬಸವನಗುಡಿ, ಜಯನಗರ, ಬೆಳ್ತಂಗಡಿ, ಮಂಗಳೂರು, ಸುಳ್ಯ, ಉಡುಪಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!