ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜ್ಮೀರ್ನಲ್ಲಿರುವ ಸೂಫಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭೇಟಿ ನೀಡಿದ್ದಾರೆ. ಬಿಗಿ ಭದ್ರತೆ ನಡುವೆ ಆಗಮಿಸಿದ ಅವರಿಗೆ ದರ್ಗಾದಲ್ಲಿ ಕೆಂಪು ಹಾಸಿನ ಸ್ವಾಗತ ನೀಡಲಾಗಿತ್ತು.
ಅವರು ಅಲ್ಲಿ ಝಿಯಾರತ್ ನೆರವೇರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಗಾ ಆವರಣದಲ್ಲಿ ಯಾವುದೇ ಭಕ್ತರ ಆಗಮನವನ್ನು ನಿಷೇಧಿಸಲಾಗಿದ್ದು ಅಲ್ಲದೇ, ದರ್ಗಾ ಮಾರುಕಟ್ಟೆಯನ್ನ ಸಹ ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ