ಅಜ್ಮೀರ್ ದರ್ಗಾದಲ್ಲಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾಗೆ ಕೆಂಪು ಹಾಸಿನ ಸ್ವಾಗತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜ್ಮೀರ್‌ನಲ್ಲಿರುವ ಸೂಫಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭೇಟಿ ನೀಡಿದ್ದಾರೆ. ಬಿಗಿ ಭದ್ರತೆ ನಡುವೆ ಆಗಮಿಸಿದ ಅವರಿಗೆ ದರ್ಗಾದಲ್ಲಿ ಕೆಂಪು ಹಾಸಿನ ಸ್ವಾಗತ ನೀಡಲಾಗಿತ್ತು.

ಅವರು ಅಲ್ಲಿ ಝಿಯಾರತ್ ನೆರವೇರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಗಾ ಆವರಣದಲ್ಲಿ ಯಾವುದೇ ಭಕ್ತರ ಆಗಮನವನ್ನು ನಿಷೇಧಿಸಲಾಗಿದ್ದು ಅಲ್ಲದೇ, ದರ್ಗಾ ಮಾರುಕಟ್ಟೆಯನ್ನ ಸಹ ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!