ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದಿದೆ ಎನ್ನಲಾದ ರೆಸ್ಟೋರಂಟ್ ಅನ್ನು ಕೆಡವಲು ಗೋವಾ ಸರ್ಕಾರ ಮುಂದಾಗಿದೆ. ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಗೋವಾದ ಪ್ರಸಿದ್ಧ ಅಂಜುನಾ ಬೀಚ್ನಲ್ಲಿರುವ ‘ಕರ್ಲೀಸ್’ ಎಂಬ ರೆಸ್ಟೋರೆಂಟ್ ನಲ್ಲಿ ಫೋಗಟ್ ಸಾಯುವ ಗಂಟೆಗಳ ಮೊದಲು ಪಾರ್ಟಿ ಮಾಡುತ್ತಿರುವುದು ಕಂಡುಬಂದಿತ್ತು. ಫೋಗಟ್ ಸಾವಿನ ಪ್ರಕರಣದಲ್ಲಿ ಬಂಧಿತರಾದ ಐವರ ಪೈಕಿ ಈ ರೆಸ್ಟೋರಂಟ್ ಮಾಲೀಕ ಎಡ್ವಿನ್ ನೂನ್ಸ್ ಕೂಡ ಸೇರಿದ್ದಾರೆ.
‘ಜಿಲ್ಲಾಡಳಿತದ ಡೆಮಾಲಿಷನ್ ಸ್ಕ್ವಾಡ್ ಅಂಜುನಾ ಪೊಲೀಸ್ ಸಿಬ್ಬಂದಿಯೊಂದಿಗೆ ಬೆಳಿಗ್ಗೆ 7.30 ರ ಸುಮಾರಿಗೆ ಬೀಚ್ಗೆ ಆಗಮಿಸಿ ಸಿಆರ್ಝಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ‘ನೋ ಡೆವಲಪ್ಮೆಂಟ್ ಝೋನ್’ನಲ್ಲಿ ನಿರ್ಮಿಸಲಾಗಿದ್ದ ರೆಸ್ಟೊರೆಂಟ್ ಅನ್ನು ಕೆಡವಿದರು ಎಂದು ಮೂಲಗಳು ವರದಿ ಮಾಡಿವೆ.
ಪೊಲೀಸರ ಪ್ರಕಾರ, ಮಾಜಿ ಟಿಕ್ಟಾಕ್ ತಾರೆ ಮತ್ತು ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಫೋಗಟ್ ಆಗಸ್ಟ್ 23 ರಂದು ಸಾಯುವ ಮೊದಲು ರೆಸ್ಟೋರೆಂಟ್ನಲ್ಲಿ ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ