ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಬೆಳಗ್ಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಆರಂಭವಾಗಿದ್ದು ನಿಫ್ಟಿ 50ಯು 100 ಪಾಯಿಂಟ್ ಏರಿಕೆಯಾಗಿ 17,900 ಮಟ್ಟಗಳ ಮೇಲೆ ವ್ಯಾಪಾರ ನಡೆಸಿದೆ ಮತ್ತು ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 350 ಪಾಯಿಂಟ್ಗಳಿಗಿಂತ ಹೆಚ್ಚು ಏರಿಕೆ ಕಂಡು 60,000 ಮಟ್ಟದಲ್ಲಿ ವಹಿವಾಟು ನಡೆಸಿದೆ.
ಟಾಪ್ ಗೇನರ್ಸ್ & ಟಾಪ್ ಲೂಸರ್ಸ್
ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್ಬಿಐ, ಎಚ್ಯುಎಲ್, ಟಾಟಾ ಸ್ಟೀಲ್ ಅಗ್ರ ವಿಜೇತರಾಗಿವೆ.
ಭಾರ್ತಿ ಏರ್ಟೆಲ್, ಬಜಾಜ್ ಫೈನಾನ್ಸ್, ಎಲ್ & ಟಿ, ಮತ್ತು ಎಂ & ಎಂ ಸೆನ್ಸೆಕ್ಸ್ನ ಟಾಪ್ ಲೂಸರ್ ಗಳಾಗಿವೆ.
ನಿಫ್ಟಿ ಮಿಡ್ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ಕ್ಯಾಪ್ 100 ಶೇಕಡಾ 0.6 ರಷ್ಟು ಏರಿಕೆಯಾಗಿವೆ.
ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಮೆಟಲ್ ಸೂಚ್ಯಂಕಗಳೊಂದಿಗೆ ಎಲ್ಲಾ ವಲಯಗಳು ಹಸಿರು ಬಣ್ಣದಲ್ಲಿ ತೆರೆದಿವೆ. ವಲಯವಾರು ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ.0.8ರಷ್ಟು ಏರಿಕೆಯಾಗಿ 40,535ಕ್ಕೆ ತಲುಪಿದೆ.