ಹೊಸದಿಗಂತ ವರದಿ,ಬನವಾಸಿ:
ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶಿರಸಿ-ಬನವಾಸಿ ರಸ್ತೆಯ ಬಿದರಹಳ್ಳಿ ಬಳಿಯ ಹುಲಿಯಪ್ಪ ಕಟ್ಟೆಯ ಬಳಿ ಶುಕ್ರವಾರ ಮಧ್ಯಾಹ ಜರುಗಿದೆ.
ಬನವಾಸಿಯ ಅಜ್ಜರಣಿ ರಸ್ತೆಯ ನಿವಾಸಿಗಳಾದ ಫೈಜಾನ್ ಇಮ್ರಾನ್ ಜವಳಿ ಮತ್ತು ಮೋಸಿನ್ ರಿಜ್ವಾನ್ ಜವಳಿ ಗಾಯಾಳುಗಳಾಗಿದ್ದಾರೆ. ಮೋಸಿನ್ ಜವಳಿಯು ಫೈಜ್ವಾನ್ ಜವಳಿಯನ್ನು ದ್ವಿಚಕ್ರದಲ್ಲಿ ಕೂರಿಸಿ ಕೊಂಡು ಶಿರಸಿ ಕಡೆಗೆ ಹೋಗುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾದ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.