Wednesday, September 28, 2022

Latest Posts

ಕಲಬುರಗಿಯಲ್ಲಿ ಭಾರೀ ಮಳೆ: ಮನೆ ಹೋಗಲು ದಾರಿ ತೋಚದೆ ಕಂಗಾಲಾದ ದನ-ಕರುಗಳು

ಹೊಸದಿಗಂತ ವರದಿ,ಕಲಬುರಗಿ:

ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಂಚೋಳಿ ತಾಲ್ಲೂಕಿನ ಅನೇಕ ಗ್ರಾಮಗಳು ಶುಕ್ರವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ಕೋಡ್ಲಿ ಗ್ರಾಮದ ಹತ್ತಿರ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದು ಜನರು ಗ್ರಾಮದೊಳಗೆ ಹೋಗಲು ಹರಸಾಹಸ ಪಡಬೇಕಾಯಿತು.

ಅಲ್ಲದೆ ಗಡಿಕೇಶ್ವರ, ಭೂತ್ಪೂರ, ಚಿಂತಪಳ್ಳಿ ಗ್ರಾಮಗಳಲ್ಲಿ ನಾಲೆಗಳು ತುಂಬಿ ಹರಿದಿವೆ. ರೈತರು ಹೊಲಕ್ಕೆ ಹೋದವರು ತೊಂದರೆ ಪಡಬೇಕಾಯಿತು.
ಕೋಡ್ಲಿ ಗ್ರಾಮದ ಮುಖ್ಯದ್ವಾರದ ಅಗಸಿ ಹತ್ರ ಸಣ್ಣ ಹಳ್ಳ ತುಂಬಿ ಹರಿದಿದ್ದು, ಶಾಲಾಮಕ್ಕಳು ಗ್ರಾಮದೊಳಗೆ ಹೋಗಲು ತೊಂದರೆ ಪಡುವಂತಾಗಿದೆ.

ದನಕರುಗಳು ನೀರಲ್ಲಿ ಹೋಗಲು ಹರಸಾಹಸ ಪಟ್ಟವು. ಯಾವುದೇ ವಾಹನಗಳು ಗ್ರಾಮದಲ್ಲಿ ಹೋಗಲು ಮಳೆಯ ನೀರು ಅಡ್ಡಗಟ್ಟಿ ಇಡೀ ರಸ್ತೆಯ ಸಂಚಾರವೇ ನಿಂತು ಹೋಗಿದೆ.

ಗಡಿಕೇಶ್ವರ ಹತ್ತಿರ ನದಿಯ ನಾಲಾ ತುಂಬಿರದ ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿವೆ.
ಇದರಿಂದಾಗಿ ಗಡಿಕೇಶ್ವಾರ್ ಹೊಡೇಬೀರನಳ್ಳಿ ರಸ್ತೆ ಸಂಪರ್ಕ ಕಡಿತವಾಗಿದೆ.ಧಾರಾಕಾರ ಮಳೆ ಸುರಿದ ಮಳೆಯಿಂದ ಕುಕ್ಲೂರು ಭಂಟನಳ್ಳಿ  ಗಡಿಕೇಶ್ವರ,ಗ್ರಾಮದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಇನ್ನೂ ಅದೇ ರೀತಿ ಹೊನ್ನಕಿರಣಗಿ ಗ್ರಾಮದಲ್ಲಿ ಮಳೆಯ ಅವಾಂತರದಿಂದ ಬಹುತೇಕ ನಾಲೆಗಳು ಒಡೆದು ಹೋಗಿದ್ದು,ಮನೆಗಳಿಗೆ ನೀರು ನುಗ್ಗಿವೆ. ದನಕರುಗಳಿಗೆ ಮನೆ ಹೋಗಲು ದಾರಿ ತೋಚದೆ ಒಂದೆಡೆ ವಿದ್ಯುತ್ ಕಂಬದ ಬಳಿ ನಿಂತು ಪರದಾಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!