ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಒಂದು ಶಬ್ದವನ್ನು ಮತ್ತೊಂದು ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದು ಏನೆಲ್ಲ ಅಚಾತುರ್ಯಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಘಟನೆ ಅತ್ಯುತ್ತಮ ನಿದರ್ಶನ. ಭೋಪಾಲ್‌ನಲ್ಲಿರುವ ರಾಜಾ ಭೋಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ತಪ್ಪಾಗಿ ಅರ್ಥೈಸಿಕೊಂಡ ಪರಿಣಾಮ ಭದ್ರತಾ ಬೆದರಿಕೆ ಸೃಷ್ಟಿಯಾದ ಘಟನೆ ನಡೆದಿದೆ.
ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಯೊಬ್ಬರು ‘ಬ್ಯಾಲಸ್ಟ್’ (ನಿಲುಭಾರ, ವಾಹನ ಅಥವಾ ರಚನೆಗೆ ಸ್ಥಿರತೆ ಒದಗಿಸಲು ಬಳಸುವ ವಸ್ತು) ಬದಲಿಗೆ ‘ಬ್ಲಾಸ್ಟ್’ ಎಂದು ತಪ್ಪಾಗಿ ಕೇಳಿಸಿ ಕೊಂಡ ಹಿನ್ನೆಲೆ ಗುರುವಾರ ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಭದ್ರತಾ ಬೆದರಿಕೆಯಾಗಿದೆ ಎಂದು ಭೀತಿ ವಾತಾವರಣ ಸೃಷ್ಟಿಸಿತು.
ವಿಮಾನ 6E-7931ನಲ್ಲಿ ಬ್ಯಾಲಸ್ಟ್‌ನ್ನು ಆಗ್ರಾಗೆ ತಲುಪಿಸುವ ಬಗ್ಗೆ ಗುರುವಾರ ಬೆಳಗ್ಗೆ 9.25ಕ್ಕೆ ಇಂಡಿಗೋ ಟಿಕೆಟ್ ಕೌಂಟರ್‌ಗೆ ಕರೆಯೊಂದು ಬಂದಿತು. ಕರೆ ಸ್ವೀಕರಿಸಿದ ಇಂಡಿಗೋ ಸಿಬ್ಬಂದಿ ಬಲ್ಲಾಸ್ಟ್ ನ್ನು ಬ್ಲಾಸ್ಟ್ (ಸ್ಫೋಟ) ಎಂದು ತಪ್ಪಾಗಿ ಅರ್ಥೈಸಿಕೊಂಡರು. ಕೂಡಲೇ ಬಾಂಬ್ ಬೆದರಿಕೆ ಅಂದಾಜಿಸುವಿಕೆ ಸಮಿತಿಗೆ (ಬಿಎಟಿಸಿ) ಕರೆ ಮಾಡಿ ವಿಷಯ ತಿಳಿಸ ಲಾಯಿತು. ಇದನ್ನು ಪರಿಶೀಲಿಸಿದ ಬಿಎಟಿಸಿ ಕರೆ ಅನಿರ್ದಿಷ್ಟ ಎಂದು ಘೋಷಿಸಿತು.
ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲ ಭದ್ರತಾ ವ್ಯವಸ್ಥೆಗಳನ್ನು ಚುರುಕುಗೊಳಿಸಲಾಯಿತು. ಆದರೆ, ಬ್ಯಾಲಸ್ಟ್ ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಇಷ್ಟೆಲ್ಲ ಅಚಾತುರ್ಯವಾಯಿತೆಂದು ತಿಳಿದ ವಿಮಾನ ನಿಲ್ದಾಣ ಆಡಳಿತವು ಇದರಿಂ ದಾದ ಅನಾನುಕೂಲತೆ ಮತ್ತು ನಷ್ಟಕ್ಕೆ ಕ್ಷಮೆಯಾಚಿಸಿತು ಎಂದು ವಿಮಾನ ನಿಲ್ದಾಣ ನಿರ್ದೇಶಕ ಅಮೃತ್ ಮಿಂಜ್ ತಿಳಿಸಿದ್ದಾರೆ.