January15, 2026
Thursday, January 15, 2026
spot_img

ಕೋಣೆಯಲ್ಲಿ ಮಲಗಿದ್ದ ಮೂವರು ಉಸಿರುಗಟ್ಟಿ ದಾರುಣ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾತ್ರಿ ರೂಮ್​​ನಲ್ಲಿ ಚಳಿಯಿಂದ ಪಾರಾಗಲು ಕೋಣೆಯ ಬಾಗಿಲು ಕಿಟಕಿ ಮುಚ್ಚಿ, ಇದ್ದಿಲು ಪಕ್ಕದಲ್ಲಿಟ್ಟು ಮಲಗಿದ ಯುವಕರ ಗುಂಪು ಆಮ್ಮಜನಕ ಕೊರತೆಯಿಂದ ದಾರುಣ ಅಂತ್ಯವಾಗಿದೆ.

ಮೂವರು ಯುವಕರು ಉಸಿರುಗಟ್ಟಿ ಮೃತಪಟ್ಟಿದ್ದರೆ, ಮತ್ತೊರ್ವನ ಸ್ಥಿತಿ ಗಂಭೀರವಾದ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.

ಕಾರ್ಯಕ್ರಮಕ್ಕೆ ತೆರಳಿದ್ದ ಈ ಯುವಕರು ಮರಳಿ ಬಂದು ತಮ್ಮ ಕೋಣೆಯಲ್ಲಿ ನಿದ್ದಿಗೆ ಜಾರಿದ್ದರು. ಕೋಣೆಯಲ್ಲಿ ಆಮ್ಲಜನಕ ಕೊರತೆಯಿಂದ ಯುವಕರು ಮೃತಪಟ್ಟಿರುವ ಶಂಕೆ ಇದೆ.

ಬೆಳಗಾವಿ ನಗರದ ಅಮನ್ ನಗರದ ನಿವಾಸಿ ರಿಹಾನ್ ಮತ್ತೆ( 22), ಮೋಹಿನ್ ನಾಲಬಂದ(23), ಸರ್ಫರಾಜ್ ಹರಪ್ಪನಹಳ್ಳಿ,(22) ಮೃತ ದುರ್ದೈವಿಗಳು. ಮತ್ತೊರ್ವ 19ರ ಹರೆಯದ ಯುವಕ ಶಾಹನಾವಾಜ್ ಸ್ಥಿತಿ ಗಂಭೀರವಾಗಿದೆ. ಬೆಳಗಾವಿಯಲ್ಲಿ ವಿಪರೀತ ಚಳಿ ಶುರುವಾಗಿದೆ. ನಾಲ್ವರು ಯುವಕರು ಕಾರ್ಯಕ್ರಮಕ್ಕೆ ತೆರಳಿ ಮರಳಿ ಬಂದ ಬಳಿ ಚಳಿಯಿಂದ ಪಾರಾಗಲು ಮಲುಗುವಾಗ ಇದ್ದಿಲಿನ ಬೆಂಕಿ ಇಟ್ಟಿದ್ದಾರೆ. ಕೋಣೆಯೊಳಗೆ ಬೆಚ್ಚಗಿರಲಿ ಎಂದು ಈ ರೀತಿ ಮಾಡಿದ್ದಾರೆ. ಜೊತೆಗೆ ಕಿಟಕಿ, ಬಾಗಿಲು ಕೂಡ ಮುಚ್ಚಿದ್ದಾರೆ. ಸುಸ್ತಾಗಿದ್ದ ಯುವಕರು ಬೇಗನೆ ನಿದ್ದೆಗೆ ಜಾರಿದ್ದಾರೆ. ಆದರೆ ನಿದ್ದೆಗೆ ಜಾರುತ್ತಿದ್ದಂತೆ ಇದ್ದಿಲಿನ ಬೆಂಕಿ ಹೊಗೆಯಾಡಿದೆ. ಈ ಹೊಗೆ ಕೋಣೆ ತುಂಬಿಕೊಂಡಿದೆ. ಹೊಗೆಯಿಂದ ಯುವಕರಿಗೆ ಆಮ್ಲಜನಕ ಕೊರತೆಯಾಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Most Read

error: Content is protected !!