ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ 15ನೇ ಆವೃತ್ತಿಯ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಸಜ್ಜಾಗಿದ್ದು, ಇಂದು ರಾತ್ರಿ 7.30ಕ್ಕೆ ನಡೆಯುವ ಕಾಳಗದಲ್ಲಿ ಉಭಯ ತಂಡಗಳು ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹುಮ್ಮಸ್ಸಿನಲ್ಲಿವೆ.
ಸ್ಟಾರ್ ಆಟಗಾರರ ಕೊರತೆ ಮಧ್ಯೆಯೂ ಶ್ರೀಲಂಕಾ ಬಿಸಿರಕ್ತದ ಯುವಕರ ಹೋರಾಟದಿಂದ ಭಾರತ, ಪಾಕಿಸ್ತಾನದಂತಹ ತಂಡಗಳನ್ನು ಮೆಟ್ಟಿ ಫೈನಲ್ ತಲುಪಿದೆ. ನಾಯಕ ದಸುನ್ ಶನಕ ನೇತೃತ್ವದ ತಂಡ ಆರನೇ ಬಾರಿಗೆ ಏಷ್ಯಾ ಕಪ್ ಎತ್ತಲು ತುದಿಗಾಲ ಮೇಲೆ ನಿಂತಿದೆ. ಇನ್ನೊಂದೆಡೆ ಪಾಕಿಸ್ತಾನ ಕೂಡ ದೀರ್ಘ ಸಮಯದ ಬಳಿಕ ಮತ್ತೆ ಫೈನಲ್ ತಲುಪಿದ್ದು, 3ನೇ ಬಾರಿಗೆ ಪ್ರಶಸ್ತಿಯನ್ನು ಬಾಚಿಕೊಳ್ಳುವ ಇರಾದೆಯಲ್ಲಿದೆ. ಉಭಯ ತಂಡಗಳು ಏಷ್ಯಾಕಪ್ ಫೈನಲ್ನಲ್ಲಿ ಮೂರು ಬಾರಿ ಎದುರಾಗಿವೆ. ಇದರಲ್ಲಿ ಶ್ರೀಲಂಕಾ 2 ಬಾರಿ (1986, 2014ರಲ್ಲಿ) ಗೆಲುವು ಪಡೆದರೆ, ಪಾಕಿಸ್ತಾನ ಒಂದು ಬಾರಿ(2000 ರಲ್ಲಿ) ಮಾತ್ರ ಜಯಿಸಿದೆ.