Tuesday, September 27, 2022

Latest Posts

ಪಾಕಿಸ್ತಾನ- ಶ್ರೀಲಂಕಾ ಮಧ್ಯೆ ಇಂದು ಹಣಾಹಣಿ: ಯಾರ ಪಾಲಿಗೆ ಒಲಿಯುತ್ತೆ ಏಷ್ಯಾ ಕಪ್ ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ 15ನೇ ಆವೃತ್ತಿಯ ಏಷ್ಯಾ ಕಪ್​ ಫೈನಲ್​ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಸಜ್ಜಾಗಿದ್ದು, ಇಂದು ರಾತ್ರಿ 7.30ಕ್ಕೆ ನಡೆಯುವ ಕಾಳಗದಲ್ಲಿ ಉಭಯ ತಂಡಗಳು ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಹುಮ್ಮಸ್ಸಿನಲ್ಲಿವೆ.
ಸ್ಟಾರ್​ ಆಟಗಾರರ ಕೊರತೆ ಮಧ್ಯೆಯೂ ಶ್ರೀಲಂಕಾ ಬಿಸಿರಕ್ತದ ಯುವಕರ ಹೋರಾಟದಿಂದ ಭಾರತ, ಪಾಕಿಸ್ತಾನದಂತಹ ತಂಡಗಳನ್ನು ಮೆಟ್ಟಿ ಫೈನಲ್​ ತಲುಪಿದೆ. ನಾಯಕ ದಸುನ್​ ಶನಕ ನೇತೃತ್ವದ ತಂಡ ಆರನೇ ಬಾರಿಗೆ ಏಷ್ಯಾ ಕಪ್​ ಎತ್ತಲು ತುದಿಗಾಲ ಮೇಲೆ ನಿಂತಿದೆ. ಇನ್ನೊಂದೆಡೆ ಪಾಕಿಸ್ತಾನ ಕೂಡ ದೀರ್ಘ ಸಮಯದ ಬಳಿಕ ಮತ್ತೆ ಫೈನಲ್​ ತಲುಪಿದ್ದು, 3ನೇ ಬಾರಿಗೆ ಪ್ರಶಸ್ತಿಯನ್ನು ಬಾಚಿಕೊಳ್ಳುವ ಇರಾದೆಯಲ್ಲಿದೆ. ಉಭಯ ತಂಡಗಳು ಏಷ್ಯಾಕಪ್ ಫೈನಲ್‌ನಲ್ಲಿ ಮೂರು ಬಾರಿ ಎದುರಾಗಿವೆ. ಇದರಲ್ಲಿ ಶ್ರೀಲಂಕಾ 2 ಬಾರಿ (1986, 2014ರಲ್ಲಿ) ಗೆಲುವು ಪಡೆದರೆ, ಪಾಕಿಸ್ತಾನ ಒಂದು ಬಾರಿ(2000 ರಲ್ಲಿ) ಮಾತ್ರ ಜಯಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!