ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬ್ರಹ್ಮಾಸ್ತ್ರ ಸಿನಿಮಾ ಎರಡು ದಿನಗಳಲ್ಲಿ 160 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.
ರಣ್ಬೀರ್ ಕಪೂರ್, ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿರುವ ಬ್ರಹ್ಮಾಸ್ತ್ರ ಸಿನಿಮಾ ಶುಕ್ರವಾರ ವಿಶ್ವಾದ್ಯಂತ 8,913 ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಿ ಮೊದಲ ದಿನವೇ ಜಗತ್ತಿನೆಲ್ಲೆಡೆ 75 ಕೋಟಿ ರೂ. ಸಂಗ್ರಹಿಸಿತ್ತು. ಕಳೆದೆರಡು ದಿನಗಳಲ್ಲಿ 160 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ ಎಂದು ಚಿತ್ರ ತಯಾರಕರು ಇಂದು ತಿಳಿಸಿದ್ದಾರೆ.
ಬ್ರಹ್ಮಾಸ್ತ್ರ ಮೊದಲ ದಿನ 75 ಕೋಟಿ ಕಲೆಕ್ಷನ್ ಮಾಡಿದ್ದು, ಈ ಎರಡು ದಿನಗಳ ಭರ್ಜರಿ ಕಲೆಕ್ಷನ್ ಮೂಲಕ ಎಲ್ಲಾ ದಾಖಲೆಗಳನ್ನೂ ಹಿಂದಕ್ಕೆ ತಳ್ಳಿದೆ. ಸಿನಿಮಾಗೆ ಬಹಿಷ್ಕಾರದ ಬಿಸಿ ತಾಗಿತ್ತು. ಅಲ್ಲದೇ ನಟ, ನಟಿಯ ಹೇಳಿಕೆಗಳು ವಿವಾದಕ್ಕೆ ಈಡಾಗಿತ್ತು. ಆದರೂ ಆಶಾಭಾವನೆಯೊಂದಿಗೆ ಚಿತ್ರತಂಡ ದೇಶಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿತ್ತು. ಈ ಸಿನಿಮಾವೀಗ ರಣ್ಬೀರ್ ಕಪೂರ್ ಅಭಿನಯದ 100 ಕೋಟಿ ದಾಟಿದ ಸಿನಿಮಾಗಳ ಪಟ್ಟಿ ಸೇರಿದೆ.
https://www.instagram.com/p/CiW2nB_outg/?utm_source=ig_embed