ಎರಡು ದಿನಗಳಲ್ಲಿ 160 ಕೋಟಿ ರೂ. ಕಲೆಕ್ಷನ್ ಪಡೆದ ‘ಬ್ರಹ್ಮಾಸ್ತ್ರ’

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬ್ರಹ್ಮಾಸ್ತ್ರ ಸಿನಿಮಾ ಎರಡು ದಿನಗಳಲ್ಲಿ 160 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.
ರಣ್​ಬೀರ್​ ಕಪೂರ್​, ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿರುವ ಬ್ರಹ್ಮಾಸ್ತ್ರ ಸಿನಿಮಾ ಶುಕ್ರವಾರ ವಿಶ್ವಾದ್ಯಂತ 8,913 ಸ್ಕ್ರೀನ್​​​ಗಳಲ್ಲಿ ಬಿಡುಗಡೆ ಆಗಿ ಮೊದಲ ದಿನವೇ ಜಗತ್ತಿನೆಲ್ಲೆಡೆ 75 ಕೋಟಿ ರೂ. ಸಂಗ್ರಹಿಸಿತ್ತು. ಕಳೆದೆರಡು ದಿನಗಳಲ್ಲಿ 160 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ ಎಂದು ಚಿತ್ರ ತಯಾರಕರು ಇಂದು ತಿಳಿಸಿದ್ದಾರೆ.

ಬ್ರಹ್ಮಾಸ್ತ್ರ ಮೊದಲ ದಿನ 75 ಕೋಟಿ ಕಲೆಕ್ಷನ್ ಮಾಡಿದ್ದು, ಈ ಎರಡು ದಿನಗಳ ಭರ್ಜರಿ ಕಲೆಕ್ಷನ್ ಮೂಲಕ ಎಲ್ಲಾ ದಾಖಲೆಗಳನ್ನೂ ಹಿಂದಕ್ಕೆ ತಳ್ಳಿದೆ. ಸಿನಿಮಾಗೆ ಬಹಿಷ್ಕಾರದ ಬಿಸಿ ತಾಗಿತ್ತು. ಅಲ್ಲದೇ ನಟ, ನಟಿಯ ಹೇಳಿಕೆಗಳು ವಿವಾದಕ್ಕೆ ಈಡಾಗಿತ್ತು. ಆದರೂ ಆಶಾಭಾವನೆಯೊಂದಿಗೆ ಚಿತ್ರತಂಡ ದೇಶಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿತ್ತು. ಈ ಸಿನಿಮಾವೀಗ ರಣ್​ಬೀರ್​ ಕಪೂರ್​ ಅಭಿನಯದ 100 ಕೋಟಿ ದಾಟಿದ ಸಿನಿಮಾಗಳ ಪಟ್ಟಿ ಸೇರಿದೆ.

https://www.instagram.com/p/CiW2nB_outg/?utm_source=ig_embed

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!