ಹೊಸದಿಗಂತ ಡಿಜಿಟಲ್ ಡೆಸ್ಕ್
ದೆಹಲಿ ಪೊಲೀಸರು ಜನರ ಸುರಕ್ಷತೆಯ ಕುರಿತು ವಿವಿಧ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುತ್ತಾರೆ. ಅದೇ ರೀತಿ ರಸ್ತೆ ಸುರಕ್ಷತೆಯ ಕುರಿತು ಟ್ವೀಟ್ ಮಾಡಿದ್ದು, ಇದೀಗ ಈ ಟ್ವಿಟ್ ಭಾರೀ ಸದ್ದು ಮಾಡುತ್ತಿದೆ.
ಹೌದು, ‘ಏ ಭಾಯಿ, ಜರಾ ದೇಖ್ ಕೆ ಚಲೋ’ ಹಾಡನ್ನು ಪ್ಲೇ ಮಾಡುವುದರೊಂದಿಗೆ ಪಾಕ್ ನ ಆಸೀಫ್ ಅಲಿ ಮತ್ತು ಶಾದಾಬ್ ಖಾನ್ ಅವರು ಒಬ್ಬರನ್ನೊಬ್ಬರು ಡಿಕ್ಕಿ ಹೊಡೆದುಕೊಂಡ ಸನ್ನಿವೇಶವನ್ನು ದೆಹಲಿ ಪೊಲೀಸರು ಮೀಮ್ ಆಗಿ ಕ್ರಿಯೆಟ್ ಮಾಡಿ ಟ್ವೀಟ್ ಮಾಡಿದ್ದಾರೆ. ಸಖತ್ ವೈರಲ್ ಆಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಏಷ್ಯಾ ಕಪ್ ಫೈನಲ್ ನಲ್ಲಿ ಶ್ರೀಲಂಕಾ ತಾಣದ ಆಟಗಾರ ಹೊಡೆದ ಬಾಲ್ ಹಿಡಿಯುವ ಭರದಲ್ಲಿ ಇಬ್ಬರೂ ಫೀಲ್ಡರ್‌ಗಳು ಡಿಕ್ಕಿ ಹೊಡೆದುಕೊಂಡು ಕ್ಯಾಚ್ ಬಿಟ್ಟಿದ್ದರು. ಆಗ ಆ ಬಾಲ್ ಬೌಂಡರಿ ಗಡಿ ದಾಟಿತುಕೈಬಿಟ್ಟ ಕ್ಯಾಚ್‌ಗಳ ಪರಿಣಾಮವಾಗಿ, ಪಾಕಿಸ್ತಾನ ಅಂತಿಮ ಐದು ಓವರ್‌ಗಳಲ್ಲಿ ಪಂದ್ಯ ಕೈಚೆಲ್ಲಿತು.
ಈ ವಿಡಿಯೋ ವನ್ನು ಟ್ವೀಟ್ ಮಾಡಿ ‘ಏ ಭಾಯಿ, ಜರಾ ದೇಖ್ ಕೆ ಚಲೋ’ ಹಾಡನ್ನು ಪ್ಲೇ ಮಾಡಿದ್ದು, ಭಾರೀ ಟ್ರೆಂಡ್ ಆಗುತ್ತಿದೆ.
Ae Bhai, Zara Dekh Ke Chalo#RoadSafety #AsiaCup2022Final pic.twitter.com/gepAVvrO33
— Delhi Police (@DelhiPolice) September 12, 2022
ಇದಕ್ಕೂ ಮೊದಲು ದೆಹಲಿ ಪೊಲೀಸರು ವಿರಾಟ್ ಶಾಟ್ಗಳ ಬಗ್ಗೆ ಟ್ವೀಟ್ ಮಾಡಿದ್ದರು. ವಿರಾಟ್ ಕೊಹ್ಲಿ ಬಾಲ್ಗಳನ್ನು ಹೊಡೆಯುವ ವೇಗದಂತೆ ನೀವು ಅನುಮಾನಾಸ್ಪದ ಅಪ್ಲಿಕೇಶನ್‌ಗಳಿಗೆ ಅನುಮತಿ ಬಟನ್ ಒತ್ತಬೇಡಿ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನ ಬ್ಯಾಟಿಂಗ್ ಕೌಶಲ್ಯ ಶ್ಲಾಘಿಸಿದರು.