ಮಳೆಗಾಲದಲ್ಲಿ ಟ್ರಿಪ್ ಮಾಡೋ ಖುಷಿಯೇ ಬೇರೆ. ಡ್ರೈವಿಂಗ್ ಮಾಡೋರಿಗೆ ಮಾತ್ರ ಸ್ವಲ್ಪ ತಲೆನೋವಾದ್ರೂ, ಊಟದ ರುಚಿ, ನಿಸರ್ಗದ ಅಂದ ಕಾಣೋದು ಈ ಕಾಲದಲ್ಲೇ. ಒಂದು ದಿನ ಟ್ರಿಪ್ ಮಾಡಬೇಕು ಅಂದುಕೊಂಡವರಿಗೆ ಈ ಲೇಖನದಿಂದ ಸಹಾಯ ಆಗಬಹುದು, ಒನ್ ಡೇ ಟ್ರಿಪ್ಗೆ ಈ ಜಾಗಗಳು ಸೂಕ್ತ.. ಯಾವುದು ನೋಡಿ..
ನೀವೇ ಡ್ರೈವ್ ಮಾಡಿಕೊಂಡು ಹೋಗಬೇಕು ಅಂದುಕೊಂಡಿದ್ರೆ ನಂದಿಬೆಟ್ಟಕ್ಕೆ ಹೋಗಿಬನ್ನಿ, ತಲುಪುವ ಜಾಗ, ಹೋಗುವ ದಾರಿ ಎರಡೂ ಅದ್ಭುತ.
ನಮ್ಮ ಸಂಸ್ಕೃತಿ ವೈಭವ ತೋರಿಸುವ ಹಂಪಿಗೆ ಹೋಗಿಬನ್ನಿ, ಒಂದು ದಿನದ ಸೈಟ್ ಸೀಯಿಂಗ್, ಫೈರ್ ಕ್ಯಾಂಪ್ ಎಲ್ಲವನ್ನೂ ಮುಗಿಸಬಹುದು.
ಆಗುಂಬೆಯ ಸೂರ್ಯಾಸ್ತ ನೋಡೋದಕ್ಕೆ ಯಾರಿಗೆ ಇಷ್ಟ ಇಲ್ಲ ಹೇಳಿ, ಸೂರ್ಯಾಸ್ತ ನೋಡಲು ಆಗುಂಬೆಗೆ ಹೋಗಿ ಬನ್ನಿ
ನೀರಿನಲ್ಲಿ ಆಟ ಆಡಬೇಕು ಎಂದಾದರೆ ದಾಂಡೇಲಿಗೆ ಹೋಗಿಬನ್ನಿ, ನೀರು ಕಡಿಮೆ ಇದ್ದರೆ ಎಲ್ಲ ರೀತಿ ಜಲಕ್ರೀಡೆಗೂ ಅವಕಾಶ ಇದೆ.
ನಮಗೆ ನೇಚರ್ ಎಲ್ಲಾ ಬೇಡ ಸಮುದ್ರ ಬೇಕು ಅನ್ನೋದಾದ್ರೆ ಗೋಕರ್ಣಕ್ಕೆ ಹೋಗಿಬನ್ನಿ, ಮಳೆಯಲ್ಲೂ ಬೀಚ್ ಸೌಂದರ್ಯ ಹೇಳತೀರದು.
ವಿಶ್ವವಿಖ್ಯಾತ ಜೋಗಜಲಪಾತ ನೋಡೋದನ್ನು ಮರೆಯಬೇಡಿ. ಜೊತೆಗೆ ಸುತ್ತಮುತ್ತಲಿನ ಸ್ಥಳಗಳನ್ನು ನೋಡಬಹುದು.