ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಅಣಕ: ಅಜಯ್‌ ದೇವ್‌ಗನ್‌ ಚಿತ್ರದ ಮೇಲೆ ಬಿತ್ತು ಕೇಸ್

ಹೊಸದಿಗಂತ ಡಿಜಟಲ್‌ ಡೆಸ್ಕ್‌
ನಿರ್ದೇಶಕ ಇಂದ್ರ ಕುಮಾರ್ ಅವರ ಮುಂಬರುವ ಚಿತ್ರ ‘ಥ್ಯಾಂಕ್ ಗಾಡ್’ ಸಂಕಷ್ಟಕ್ಕೆ ಸಿಲುಕಿದೆ. ನಿರ್ದೇಶಕ ಇಂದ್ರ ಕುಮಾರ್, ನಟರಾದ ಅಜಯ್ ದೇವಗನ್ ಮತ್ತು ಸಿದ್ಧಾರ್ಥ ಮಲ್ಹೋತ್ರಾ ವಿರುದ್ಧ ಜಾನ್‌ಪುರ ನ್ಯಾಯಾಲಯದಲ್ಲಿ ವಕೀಲ ಹಿಮಾಂಶು ಶ್ರೀವಾಸ್ತವ ಅವರು ಪ್ರಕರಣ ದಾಖಲಿಸಿದ್ದಾರೆ.
ಅರ್ಜಿದಾರರ ಪ್ರಕಾರ, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ನ ಲ್ಲಿ ಹಿಂದೂ ಧರ್ಮವನ್ನು ಅಣಕಿಸುವ ವಿಚಾರಗಳಿವೆ. ಮತ್ತು ಚಿತ್ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ.
ಟ್ರೇಲರ್‌ ನಲ್ಲಿ ಅಜಯ್‌ ದೇವಗನ್‌ ಸೂಟ್‌ ಧರಿಸಿ ಚಿತ್ರಗುಪ್ತ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಂದು ದೃಶ್ಯದಲ್ಲಿ ಅವರು ಹಾಸ್ಯ ಚಟಾಕಿ ಹಾರಿಸುವ ವೇಳೆ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ ಎಂದು ಶ್ರೀವಾಸ್ತವ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
“ಚಿತ್ರಗುಪ್ತನನ್ನು ಕರ್ಮದ ಭಗವಂತ ಎಂದು ಪರಿಗಣಿಸಲಾಗುತ್ತದೆ ಮತ್ತು ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ದಾಖಲೆಯನ್ನು ಇಡುತ್ತಾನೆ. ದೇವರುಗಳನ್ನು ಲಘುವಾಗಿ ಚಿತ್ರಿಸುವ ಇಂತಹ ಚಿತ್ರಣವು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವುದಲ್ಲದೆ ಅಹಿತಕರ ಪರಿಸ್ಥಿತಿಯನ್ನು ಉಂಟುಮಾಡಬಹುದು” ಎಂದು ಅರ್ಜಿದಾರರು ದೂರಿದ್ದಾರೆ. ‘ಥ್ಯಾಂಕ್ ಗಾಡ್’ ಚಿತ್ರ ಅಕ್ಟೋಬರ್ 24 ರಂದು ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!