- ದನಿಯಾ – 2 ಚಮಚ
- ಜೀರಿಗೆ – ಅರ್ಧ ಚಮಚ
- ಸೋಂಪು- 1 ಚಮಚ
- ಕಾಳು ಮೆಣಸು- 1 ಚಮಚ
- ಓಂಕಾಳು- ಅರ್ಧ ಚಮಚ
- ಒಣ ಶುಂಠಿ- 1 ಚಮಚ
- ಒಣ ಪುದೀನಾ- 1 ಚಮಚ
- ಬ್ಲ್ಯಾಕ್ ಸಾಲ್ಟ್- 1 ಚಮಚ
- ಆಮ್ಚೂರ್ ಪುಡಿ- 1 ಚಮಚ
- ಇಂಗು- 1 ಚಮಚ
- ಉಪ್ಪು- ಅರ್ಧ ಚಮಚ
ಮಾಡುವ ವಿಧಾನ
- ಮೊದಲಿಗೆ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ದನಿಯಾ, ಜೀರಿಗೆ, ಸೋಂಪು, ಕಾಳು ಮೆಣಸು, ಓಂಕಾಳು, ಒಣ ಶುಂಠಿ ಹಾಗೂ ಒಣ ಪುದೀನಾ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದನ್ನು ತಣ್ಣಗಾಗಲು ಬಿಡಿ.
- ಬಳಿಕ ಮಿಕ್ಸಿ ಜಾರ್’ಗೆ ಹಾಕಿ. ಇದಕ್ಕೆ ಬ್ಲ್ಯಾಕ್ ಸಾಲ್ಟ್, ಆಮ್ಚೂರ್ ಪುಡಿ, ಇಂಗು ಹಾಗೂ ಉಪ್ಪು ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡರೆ, ಚಾಟ್ ಮಸಾಲಾ ಪುಡಿ ಸಿದ್ಧ.

