ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ನಡೆದ ಚುನವಣೆಯಲ್ಲಿ ತಮ್ಮ ಸರ್ಕಾರವನ್ನು ಸೋಲಿಸಿದ ಬಳಿಕ ಸ್ವೀಡನ್ ಪ್ರಧಾನ ಮ್ಯಾಗ್ಡಲೀನಾ ಆಂಡರ್ಸನ್ ರಾಜೀನಾಮೆ ನೀಡಿದ್ದಾರೆ.
ಆಂಡರ್ಸನ್ ಅವರ ಮಧ್ಯ-ಎಡ ಒಕ್ಕೂಟವು ಬಲಪಂಥೀಯ ಪಕ್ಷಗಳ ಬಣಕ್ಕೆ 176 ಸ್ಥಾನಗಳಿಂದ 173ಕ್ಕೆ ಸೋಲುವಂತೆ ಕಾಣುತ್ತಿದೆ, ಈಗಾಗಲೇ 99 ಪ್ರತಿಶತ ಮತಗಳನ್ನು ಎಣಿಸಲಾಗಿದೆ.
ಮಾಡರೇಟ್ ಪಕ್ಷದ ನಾಯಕ ಉಲ್ಫ್ ಕ್ರಿಸ್ಟರ್ಸನ್ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಬಿಬಿಸಿ ವರದಿ ಮಾಡಿದೆ.
ಮರುಎಣಿಕೆ ನಂತರ ಅಂತಿಮ ಫಲಿತಾಂಶ ದೃಢೀಕರಿಸಬೇಕಾಗಿದೆ. ಇದರ ಹೊರತಾಗಿಯೂ ಆಂಡರ್ಸನ್ ಸೋಲನ್ನು ಒಪ್ಪಿಕೊಂಡು ರಾಜೀನಾಮೆ ನೀಡುವುದಾಗಿ ಹೇಳಿದ್ದರು.