ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಳಿಗಿಳಿಯಲು ಸಜ್ಜಾಗುತ್ತಿದೆ ವಿದ್ಯುತ್ ಚಾಲಿತ ರೈಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಮ್ಮು -ಕಾಶ್ಮೀರ ಬನಿಹಾಲ್-ಬಾರಾಮುಲ್ಲಾ ನಡುವೆ ತನ್ನ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಹಿನ್ನೆಲೆ 137 ಕಿಮೀ ಉದ್ದದ ರೈಲು ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲು ಮೊದಲ ಪ್ರಯಾಣ ಆರಂಭಿಸಲಿದೆ.

2019ರಲ್ಲಿ ಈ ಯೋಜನೆ ಆರಂಭಗೊಳಿಸಲಾಗಿದ್ದು, ಸೆಪ್ಟೆಂಬರ್ 26ರಂದು ವಿದ್ಯುತ್ ಚಾಲಿತ ರೈಲಿನ ಪ್ರಾಯೋಗಿಕ ಪರೀಕ್ಷೆಯನ್ನು ಪ್ರಧಾನ ಮುಖ್ಯ ಇಂಜಿನಿಯರ್ ಪರಿಶೀಲನೆ ನಡೆಸಲಿದ್ದಾರೆ. ಗಾಂಧಿ ಜಯಂತಿಯಂದು ಈ ರೈಲು ಸಂಚಾರವನ್ನು ಉದ್ಘಾಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

137 ಕಿಮೀ ಉದ್ದದ ವಿದ್ಯುತ್ ಚಾಲಿತ ರೈಲು ಸಂಪರ್ಕವು ಬಾರಾಮುಲ್ಲಾ-ಬುದ್ಗಾಮ್ ನಡುವಿನ ಪ್ರದೇಶಗಳಲ್ಲಿ ಪ್ರಯೋಗಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದ ಬುದ್ಗಾಮ್-ಬನಿಹಾಲ್ ಭಾಗದ ಪ್ರಯೋಗವನ್ನು ಸೆಪ್ಟೆಂಬರ್ 20ರಂದು ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!