ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಭರ್ಜರಿ ಕಾರ್ಯಾಚರಣೆ ನಡೆಸಿ 48 ಕೋಟಿ ರೂಪಾಯಿ ಮೌಲ್ಯದ ಇ ಸಿಗರೇಟ್ (e cigarette) ಗಳನ್ನು ಜಪ್ತಿ ಮಾಡಿದೆ.
ಕಛ್ನಲ್ಲಿರುವ ಮುಂದ್ರಾ ಬಂದರಿಗೆ ಚೀನಾದಿಂದ ಕಂಟೇನರ್‌ವೊಂದು ಆಗಮಿಸಿತ್ತು. ಈ ವೇಳೆ ಡಿಆರ್ಐ ಅಧಿಕಾರಿಗಳಿಗೆ ಅನುಮಾನಾಸ್ಪದ ವಸ್ತುಗಳು ಇರುವ ಬಗ್ಗೆ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಅಧಿಕಾರಿಗಳ ಶೋಧ ಕಾರ್ಯದ ವೇಳೆ ಕಂಟೈನರ್ನಲ್ಲಿ 2,00,400 ಇ ಸಿಗರೇಟ್ಗಳು ಪತ್ತೆಯಾಗಿವೆ. ಇವುಗಳ ಮೌಲ್ಯ 48 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಭಾರತವು ಈಗಾಗಲೇ ಇ-ಸಿಗರೇಟ್ ಆಮದನ್ನು ನಿಷೇಧಿಸಿದೆ.