Friday, September 30, 2022

Latest Posts

ಗುಜರಾತ್​ನಲ್ಲಿ ಬಂದರಿನಲ್ಲಿ 48 ಕೋಟಿ ರೂಪಾಯಿ ಮೌಲ್ಯದ ಇ ಸಿಗರೇಟ್ ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗುಜರಾತ್​ನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಭರ್ಜರಿ ಕಾರ್ಯಾಚರಣೆ ನಡೆಸಿ 48 ಕೋಟಿ ರೂಪಾಯಿ ಮೌಲ್ಯದ ಇ ಸಿಗರೇಟ್ (e cigarette) ​ಗಳನ್ನು ಜಪ್ತಿ ಮಾಡಿದೆ.
ಕಛ್​ನಲ್ಲಿರುವ ಮುಂದ್ರಾ ಬಂದರಿಗೆ ಚೀನಾದಿಂದ ಕಂಟೇನರ್‌ವೊಂದು ಆಗಮಿಸಿತ್ತು. ಈ ವೇಳೆ ಡಿಆರ್​ಐ ಅಧಿಕಾರಿಗಳಿಗೆ ಅನುಮಾನಾಸ್ಪದ ವಸ್ತುಗಳು ಇರುವ ಬಗ್ಗೆ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಅಧಿಕಾರಿಗಳ ಶೋಧ ಕಾರ್ಯದ ವೇಳೆ ಕಂಟೈನರ್​ನಲ್ಲಿ 2,00,400 ಇ ಸಿಗರೇಟ್​ಗಳು ಪತ್ತೆಯಾಗಿವೆ. ಇವುಗಳ ಮೌಲ್ಯ 48 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಭಾರತವು ಈಗಾಗಲೇ ಇ-ಸಿಗರೇಟ್ ಆಮದನ್ನು ನಿಷೇಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!