ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ ಸ್ಮರಣಿಕೆಗಳನ್ನು ಆನ್ಲೈನ್ ಮೂಲಕ ಹರಾಜು ಮಾಡಲಾಗುತ್ತಿದ್ದು, ಪ್ರಧಾನಿ ಮೋದಿ ಅವರ ಎನ್ಸಿಸಿ ಕಾರ್ಡ್, ಅಯೋಧ್ಯೆಯಲ್ಲಿ ಮುಂಬರುವ ರಾಮಮಂದಿರದ ಬಹು ಮಾದರಿಗಳಿಗೆ ಮತ್ತು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್ನ ಮ್ಯಾಸ್ಕಾಟ್ನ ಪ್ರತಿಮೆಗಳಿಗೆ ಬೇಡಿಕೆ ಹೆಚ್ಚಿದೆ.
ಪ್ರಧಾನಿ ಮೋದಿಯವರ 72ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶನಿವಾರ ಬೆಳಗ್ಗೆ 10ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಅಕ್ಟೋಬರ್ 2ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಮಾದರಿ ಪ್ರತಿಮೆ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಕ್ರೀಡಾ ಸ್ಮರಣಿಕೆಗಳು ಸೇರಿದಂತೆ 1,200ಕ್ಕೂ ಹೆಚ್ಚು ವಸ್ತುಗಳ ಹರಾಜು ನಡೆಯಲಿದೆ.
ಎನ್ಸಿಸಿ ಕಾರ್ಡ್ಗೂ ಬೇಡಿಕೆ:
ಈ ಹರಾಜು ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ನೀಡಿದ ಸ್ಮರಣಿಕೆಗೆ ಹೆಚ್ಚು ಬೇಡಿಕೆ ಇದೆ. ಮೋದಿಯವರ ಛಾಯಾಚಿತ್ರ, ಲೈಫ್ ಮೆಂಬರ್, ಡೈರೆಕ್ಟರೇಟ್ ಗುಜರಾತ್, ಡಿಡಿ ಮತ್ತು ಡಿಎನ್ಹೆಚ್ಅನ್ನು ಹಳೆಯ ವಿದ್ಯಾರ್ಥಿಗಳ ಕಾರ್ಡ್ನ ರೂಪದಲ್ಲಿ ನೀಡಲಾಗಿದೆ. ಭಾನುವಾರ ಬೆಳಗ್ಗೆ 11ರವರೆಗೆ ಹಳೆಯ ವಿದ್ಯಾರ್ಥಿಗಳ ಕಾರ್ಡ್ಗೆ 20ಕ್ಕೂ ಹೆಚ್ಚು ಬಿಡ್ಗಳು ಬಂದಿವೆ.