ರಾತ್ರಿಯಿಡೀ ಕೂದಲಿಗೆ ಎಣ್ಣೆ ಹಚ್ಚಿ ಬಿಡಬಹುದಾ?

ದಟ್ಟ ಕೂದಲಿಗಾಗಿ ಆಗಾಗ ಎಣ್ಣೆ ಹಚ್ಚಿ ತೊಳೆಯುತ್ತೇವೆ. ಹೆಚ್ಚಿನ ಮಂದಿ ರಾತ್ರಿಯಿಡೀ ಎಣ್ಣೆ ಹಚ್ಚಿ ಬಿಡುತ್ತಾರೆ. ಬೆಳಗ್ಗೆ ಎದ್ದು ತಲೆಸ್ನಾನ ಮಾಡುತ್ತಾರೆ. ಬೆಳಗ್ಗೆ ಎಣ್ಣೆ ಇಳಿಯಲು ಸಮಯವೇ ಇಲ್ಲ ಎನ್ನುವಂತೆ ಆಗುತ್ತದೆ. ಹಾಗಾಗಿ ರಾತ್ರಿ ಎಣ್ಣೆ ಹಚ್ಚಿ, ದಿಂಬಿನ ಮೇಲೆ ಹಳೆ ಬಟ್ಟೆಯೊಂದನ್ನು ಹಾಕಿ ಮಲಗುವುದು ಅಭ್ಯಾಸ. ಇದು ಸರೀನಾ?

ಆಯುರ್ವೇದದ ಪ್ರಕಾರ ಇದು ತಪ್ಪು. ರಾತ್ರಿಯಿಡೀ ತಲೆಗೆ ಎಣ್ಣೆ ಹಚ್ಚಿ ಬಿಡುವುದರಿಂದ ಶೀತ, ತಲೆನೋವು, ಕಫ ಬರುತ್ತದೆ. ರಾತ್ರಿ ಎಣ್ಣೆ ಹಚ್ಚುವುದರಿಂದ ಪ್ರಯೋಜನಕ್ಕಿಂತ ಹೆಚ್ಚು ಹಾನಿಯಿದೆ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ಕಫ ದೋಷವನ್ನು ಹೊಂದಿರುತ್ತಾರೆ. ನೆಗಡಿ ಹಾಗೂ ಕೆಮ್ಮು, ತಲೆನೋವು ಮುಂತಾದ ಸಮಸ್ಯೆಗಳು ಎದುರಾಗುತ್ತವೆ.

ಹಗಲು ಎಣ್ಣೆ ಹಚ್ಚಿ, ಸ್ಕಾಲ್ಪ್ ಮಸಾಜ್ ಮಾಡುವುದು ಹಾಗೂ ಸ್ವಲ್ಪ ಸಮಯದಲ್ಲೇ ತಲೆ ತೊಳೆಯುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!