ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬ್ದ ಮಾಲಿನ್ಯ ಎಷ್ಟು ಅಪಾಯಕಾರಿ ಎಂಬುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ಶಬ್ಧ ಮಾಲಿನ್ಯದಿಂದ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಿಗೂ ಕೋಪ ಬರುತ್ತದೆ ಎಂಬುದಕ್ಕೆ ಈ ಘಟನೆಯೇ ಸ್ಪಷ್ಟ ಸಾಕ್ಷಿ. ರಸ್ತೆಯಲ್ಲಿ ಮೌನವಾಗಿ ನಡೆಯುತ್ತಿದ್ದ ಎಮ್ಮೆಯೊಂದು ಮುಂದೆ ಬರುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ರಭಸವಾಗಿ ಡಿಕ್ಕಿ ಹೊಡಿದಿದೆ. ಅಷ್ಟೇ, ಬೈಕ್ ಸವಾರ ಮಾರು ದೂರ ಹಾರಿ ಹೋಗಿ ಬಿದ್ದಿದ್ದಾನೆ.
ಈ ಘಟನೆ ಎಲ್ಲಿ ನಡೆದಿದೆ? ಇದು ಯಾವಾಗ ಸಂಭವಿಸಿತು? ಎಂಬ ವಿವರಗಳು ತಿಳಿದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಟಿಎಸ್ಆರ್ಟಿಸಿ ಎಂಡಿ ಸಜ್ಜನರ್ ಹಂಚಿಕೊಂಡಿದ್ದಾರೆ.
ರಸ್ತೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಬರುತ್ತಿದ್ದ ಎಮ್ಮೆಯೊಂದು ಬೈಕ್ ಶಬ್ದ ಕೇಳಿದ ತಕ್ಷಣ ಆಕ್ರೋಶಗೊಂಡು ಬೈಕ್ ಸವಾರರನ್ನು ಗುದ್ದಿದೆ. ಎಮ್ಮೆಯ ಹೊಡೆತಕ್ಕೆ ಬೈಕ್ ಸವಾರ ತತ್ತರಿಸಿ ಹೋಗಿದ್ದಾನೆ. ಆತ ಗಂಭೀರ ಗಾಯಗೊಂಡಂತೆ ವಿಡಿಯೋದಲ್ಲಿ ಕಾಣುತ್ತದೆ. ಶಬ್ದ ಮಾಲಿನ್ಯದಿಂದ ಆಗುವ ಹಾನಿಗೆ ಇದೊಂದು ಉದಾಹರಣೆ. ಸೈಲೆನ್ಸರ್ ಹಾಕಿಕೊಂಡು ಗಾಡಿ ಓಡಿಸುವುದರಿಂದ ಒತ್ತಡ, ಅಧಿಕ ಬಿಪಿ, ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು ಎಂದು ಸಜ್ಜನರ್ ಟ್ವೀಟ್ ಮಾಡಿದ್ದಾರೆ.
శబ్ద కాలుష్యం వలన జరిగే నష్టాలలో ఇదొక ఉదాహరణ.
హాంకింగ్, సైలెన్సర్ మార్చి నడపటం వలన స్ట్రెస్, హై బి.పి, చెవుడు మరియు హృదయ సంబంధిత రోగాలు వస్తాయి. #RoadSafety pic.twitter.com/EWDGRiqZU7
— V.C. Sajjanar, IPS (@SajjanarVC) September 18, 2022