ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಡಿಯೋ ಮೂಲಕ ಹೆರಿಗೆ ಮಾಡಿಸುವಂತೆ ವೈದ್ಯರು ನರ್ಸ್ಗೆ ಸಲಹೆ ನೀಡಿದ್ದು, ಮಗು ಮೃತಪಟ್ಟಿದೆ.
ಇದೀಗ ಮಹಿಳೆ ಕುಟುಂಬ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಸಿಡಿದೆದ್ದಿದ್ದು, ಆಸ್ಪತ್ರೆ ಮುಂದೆ ಪ್ರತಿಭಟಿಸುತ್ತಿದ್ದಾರೆ.
ಏನಾಯ್ತು?
ತಮಿಳುನಾಡಿನ ಸುಣಂಬೇಡಿಯ ಪುಷ್ಪಾ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ಬರುವಂತೆ ವೈದ್ಯರು ತಿಳಿಸಿ, ಮನೆಗೆ ಕಳುಹಿಸಿದ್ದರು.
ಅದೇ ದಿನ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿದ್ದು, ಮತ್ತೆ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಸ್ಕ್ಯಾನ್ ಮಾಡಿದಾಗ, ಮಗು ತಲೆಕೆಳಗಾಗಿ ಇರುವುದು ಕಾಣಿಸಿದೆ. ಡ್ಯೂಟಿ ಡಾಕ್ಟರ್ ಇಲ್ಲದ ಕಾರಣ ನರ್ಸ್ಗಳು ತಾವೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ.
ಆರು ಗಂಟೆಗೆ ಮಗುವಿನ ಕಾಲು ಹೊರಬಂದಿದೆ. ಇದರಿಂದ ನರ್ಸ್ಗೆ ಗಾಬರಿಯಾಗಿದ್ದು ವೈದ್ಯರಿಗೆ ಕರೆ ಮಾಡಿದ್ದಾರೆ. ಆದರೆ ವೈದ್ಯರು ತಕ್ಷಣ ಬರುವಷ್ಟು ಹತ್ತಿರದಲ್ಲಿ ಇಲ್ಲದ ಕಾರಣ, ವಿಡಿಯೋ ಕಾಲ್ ಮಾಡಲು ಸಲಹೆ ನೀಡಿದ್ದಾರೆ. ವಿಡಿಯೋ ಕಾಲ್ ಮೂಲಕ ಡೆಲಿವರಿ ಮಾಡಲು ಸಾಧ್ಯವಾಗಿಲ್ಲ.
ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಬೇರೆ ಆಸ್ಪತ್ರೆಗೆ ಕಳಿಸಲು ಆಂಬುಲೆನ್ಸ್ ಹತ್ತಿಸಿದ್ದಾರೆ. ಈ ವೇಳೆ ಮಗು ಅರ್ಧಹೊರಬಂದು ಮೃತಪಟ್ಟಿದೆ. ಮಹಿಳೆಯ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.