ಸಂಭಾಷಣೆ ಟೇಪ್‌ ಸೋರಿಕೆ ಪ್ರಕರಣ: ನೀರಾ ರಾಡಿಯಾಗೆ ಕ್ಲೀನ್‌ ಚೀಟ್‌ ನೀಡಿದ ಸಿಬಿಐ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಮತ್ತು ಮಾಧ್ಯಮದ ವ್ಯಕ್ತಿಗಳೊಂದಿಗೆ ಸಂಭಾಷಣೆಗಳನ್ನು ಧ್ವನಿಮುದ್ರಿಸಿದ ಆರೋಪದಿಂದ ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕ್ಲೀನ್ ಚಿಟ್ ನೀಡಿದೆ.

ಅವರು ವೈಷ್ಣವಿ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಮತ್ತು ಟಾಟಾ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ವಿವಿಧ ಹೈ-ರೋಲರ್ ಕ್ಲೈಂಟ್‌ಗಳನ್ನು ನಿರ್ವಹಿಸುವ ಸಾರ್ವಜನಿಕ ಸಂಬಂಧ (PR) ವ್ಯವಹಾರಹಳನ್ನು ಹೊಂದಿದ್ದರು. 2 ಜಿ ಹಗರಣಕ್ಕೆ ಸಂಬಂಧಿಸಿದಂತೆ ನೀರಾ ರಾಡಿಯಾ ಹಾಗೂ ಅವರ ಕ್ಲೈಂಟ್‌ ಗಳ ನಡುವಿನ ಸಂಭಾಷಣೆಯ ರೆಕಾರ್ಡ್‌ ಲೀಕ್ ಆಗಿತ್ತು. ಇದರಿಂದ ನೀರಾ ರಾಡಿಯಾ ವಿವಾದಕ್ಕೆ ಸಿಲುಕಿದ್ದರು.

ನವೆಂಬರ್ 16, 2007 ರಂದು ಆಗಿನ ಹಣಕಾಸು ಸಚಿವರಿಗೆ ದೂರಿನ ಮೇರೆಗೆ ರಾಡಿಯಾ ಅವರ ಫೋನ್‌ನ ಕಣ್ಗಾವಲಿನ ಭಾಗವಾಗಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗಿತ್ತು, ಒಂಬತ್ತು ವರ್ಷಗಳಲ್ಲಿ ಅವರು 300 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿತ್ತು

ಬಳಿಕ ಅವರ ವಿರುದ್ಧ ತನಿಖೆಯ ಭಾಗವಾಗಿ 14 ಪ್ರಾಥಮಿಕ ತನಿಖೆಗಳನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಇದಾಗಿ ಒಂದು ದಶಕಗಳ ಬಳಿಕ ಅವರಿಗೆ ಸಿಬಿಐ ಕ್ಲೀನ್‌ ಚೀಟ್‌ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!