ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ, ಶಿಖರ್ ಧವನ್ ಅವರ ಸಾಧನೆಯ ಸಾಲಿಗೆ ಭಾರತ ಮಹಿಳಾ ಕ್ರಿಕೆಟ್ ಸ್ಟಾರ್ ಪ್ಲೇಯರ್ ಸ್ಮೃತಿ ಮಂಧಾನಾ ಸೇರಿದ್ದಾರೆ. ಏಕದಿನದಲ್ಲಿ ಕಡಿಮೆ ಇನಿಂಗ್ಸ್ನಲ್ಲಿ ವೇಗದ 3 ಸಾವಿರ ರನ್ ಪೂರೈಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿಯಾದರೆ, ಮೂರನೇ ಭಾರತೀಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ಮೃತಿ ಮಂಧಾನಾ ಅಂತಾರಾಷ್ಟ್ರೀಯ ಏಕದಿನದಲ್ಲಿ 76 ಇನಿಂಗ್ಸ್ನಲ್ಲಿ 3023 ರನ್ ಗಳಿಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ನ ದಂತಕಥೆ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದರು. ಮಿಥಾಲಿ ರಾಜ್ 88 ಇನ್ನಿಂಗ್ಸ್ಗಳಲ್ಲಿ ಈ ಗಡಿ ದಾಟಿದ್ದರು.
ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನದ ಪಂದ್ಯದಲ್ಲಿ 40 ರನ್ ಗಳಿಸಿದ ಮಂಧಾನಾ ಈ ಸಾಧನೆ ಪೂರೈಸಿದರು. ಏಕದಿನದಲ್ಲಿ 43+ ಸರಾಸರಿ ಮತ್ತು 85 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
3⃣0⃣0⃣0⃣ ODI runs & counting! 👏 👏
Another landmark for @mandhana_smriti! 👍 👍
Follow the match ▶️ https://t.co/dmQVpiNH4h #TeamIndia | #ENGvIND pic.twitter.com/c5tQfqwTBu
— BCCI Women (@BCCIWomen) September 21, 2022