ಮಿಥಾಲಿ ರಾಜ್​ ದಾಖಲೆ ಮುರಿದ ಸ್ಮೃತಿ ಮಂಧಾನಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್​ ಕೊಹ್ಲಿ, ಶಿಖರ್​ ಧವನ್​ ಅವರ ಸಾಧನೆಯ ಸಾಲಿಗೆ ಭಾರತ ಮಹಿಳಾ ಕ್ರಿಕೆಟ್​ ಸ್ಟಾರ್​ ಪ್ಲೇಯರ್​ ಸ್ಮೃತಿ ಮಂಧಾನಾ ಸೇರಿದ್ದಾರೆ. ಏಕದಿನದಲ್ಲಿ ಕಡಿಮೆ ಇನಿಂಗ್ಸ್​ನಲ್ಲಿ ವೇಗದ 3 ಸಾವಿರ ರನ್​ ಪೂರೈಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿಯಾದರೆ, ಮೂರನೇ ಭಾರತೀಯ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ಮೃತಿ ಮಂಧಾನಾ ಅಂತಾರಾಷ್ಟ್ರೀಯ ಏಕದಿನದಲ್ಲಿ 76 ಇನಿಂಗ್ಸ್​ನಲ್ಲಿ 3023 ರನ್​ ಗಳಿಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್​ನ ದಂತಕಥೆ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದರು. ಮಿಥಾಲಿ ರಾಜ್​ 88 ಇನ್ನಿಂಗ್ಸ್‌ಗಳಲ್ಲಿ ಈ ಗಡಿ ದಾಟಿದ್ದರು.
ಕ್ಯಾಂಟರ್​ಬರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನದ ಪಂದ್ಯದಲ್ಲಿ 40 ರನ್​ ಗಳಿಸಿದ ಮಂಧಾನಾ ಈ ಸಾಧನೆ ಪೂರೈಸಿದರು. ಏಕದಿನದಲ್ಲಿ 43+ ಸರಾಸರಿ ಮತ್ತು 85 ರ ಸ್ಟ್ರೈಕ್ ರೇಟ್‌ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!