ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಟು ವರ್ಷದ ಹಿಂದೆ ಪ್ರಮೋಷನ್ ನೀಡಿಲ್ಲ ಎಂದು ತನ್ನ ಬಾಸ್ನ ಕುಟುಂಬದ ನಾಲ್ವರನ್ನು ಕೊಂದಿದ್ದ ವ್ಯಕ್ತಿಯನ್ನು ಇದೀಗ ಬಂಧಿಸಲಾಗಿದೆ.
ಯುನೈಟೆಡ್ ಸ್ಟೇಟ್ಸ್ನ ಹೂಸ್ಟನ್ನಲ್ಲಿ 2014 ರ ಜನವರಿಯಲ್ಲಿ ಈ ಘಟನೆ ನಡೆದಿತ್ತು. ಆರೋಪಿ ಫಾಂಗ್ ಆ ದಿನದಂದು ಬಾಸ್ ಮನೆಗೆ ಬಂದು ತನ್ನ ಬಾಸ್ ಮಾಯೋ ಸನ್, ಪತ್ನಿ ಮೆಕ್ಸಿ ಸನ್, ಮಕ್ಕಳಾದ ತಿಮೋತಿ ಸನ್ ಮತ್ತು ಟೈಸನ್ ಸನ್ ಅವರಿಗೆ ಗುಂಡು ಹಾರಿಸಿದ್ದ. ಕ್ಷಣದಲ್ಲಿ ಇಡೀ ಕುಟುಂಬವೇ ನಾಶವಾಗಿತ್ತು.
ಮಾಯೋ ಸನ್ ಕೆಲಸದಲ್ಲಿ ಬಡ್ತಿಗೆ ಶಿಫಾರಸು ಮಾಡಿಲ್ಲ ಎನ್ನುವುದು ಫಾಂಗ್ ಆರೋಪ. ಕಚೇರಿಯಲ್ಲಿ ಫಾಂಗ್ ವರ್ತನೆ ಕಂಡಿದ್ದ ಮಾಯೋ ಶಿಫಾರಸು ಮಾಡಲು ಒಪ್ಪಿರಲಿಲ್ಲ. ಇದರಿಂದಾಗಿ ಪ್ರಮೋಷನ್ ಸಿಗಲಿಲ್ಲ. ಇದು ಕೊಲೆಗೆ ಕಾರಣ ಎನ್ನಲಾಗಿದೆ.
ಮನೆಯಲ್ಲಿ ಫಾಂಗ್ನ ಡಿಎನ್ಎ ಪತ್ತೆಯಾಗಿತ್ತು. ಆ ವೇಳೆ ಆತ ಚೀನಾಗೆ ತೆರಳಿದ್ದ. ಎಂದಿಗೂ ಆತನನ್ನು ಬಂಧಿಸಲು ಆಗುವುದಿಲ್ಲ ಎಂದುಕೊಂಡಂತೆಯೇ ಆತ ಕ್ಯಾಲಿಫೋರ್ನಿಯಾದ ವಿಮಾನ ನಿಲ್ದಾಣದಲ್ಲಿ ಇಳಿದಾಗ ಸಿಕ್ಕಿಹಾಕಿಕೊಂಡ.