ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ನಗರದಲ್ಲಿ ಐದು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಕನಿಷ್ಠ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇನ್ನೂ ಕೆಲವು ವ್ಯಕ್ತಿಗಳು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ.ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಎಂದು ಉಲ್ಲಾಸನಗರ ತಹಸೀಲ್ದಾರ್ (ಕಂದಾಯ ಅಧಿಕಾರಿ) ಕೋಮಲ್ ಠಾಕೂರ್ ತಿಳಿಸಿದ್ದಾರೆ.
ಉಲ್ಲಾಸನಗರ ಕ್ಯಾಂಪ್ 5 ರಲ್ಲಿರುವ ಕಟ್ಟಡದ ಮೂರನೇ ಅಂತಸ್ತಿನ ಸ್ಲ್ಯಾಬ್ ಬೆಳಿಗ್ಗೆ 11.30 ರ ಸುಮಾರಿಗೆ ಕುಸಿದಿದ್ದು, ಈ ಕಟ್ಟಡ 30 ಫ್ಲಾಟ್ಗಳನ್ನು ಹೊಂದಿದೆ. ಇದರ ರಚನೆಯು ಅಕ್ರಮವಾಗಿದ್ದು, ಈಗಾಗಲೇ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ.