ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಅನಿರೀಕ್ಷಿತವಾದ, ಕಷ್ಟಕರವಾದ ಕೆಲಸದ ಹೊರೆ ನಿಮ್ಮ ಮೇಲೆ ಬೀಳಲಿದೆ. ಅದನ್ನು ಸರಿಯಾಗಿಯೇ ನಿಭಾಯಿಸಿ ಮೆಚ್ಚುಗೆ ಗಳಿಸುವಿರಿ.
ವೃಷಭ
ಆಪ್ತರೊಂದಿಗಿನ ನಿಮ್ಮ ಆತ್ಮೀಯ ಸಂಬಂಧಕ್ಕೆ ಹುಳಿ ಹಿಂಡಲು ಕೆಲವರ ಯತ್ನ. ಅದಕ್ಕೆ ಅವಕಾಶ ನೀಡದಿರಿ. ಚಾಡಿ ಮಾತುಗಳನ್ನು ನಂಬದಿರಿ. ಆರ್ಥಿಕ ಬಿಕ್ಕಟ್ಟು.
ಮಿಥುನ
ಕೆಲವರು ನಿಮ್ಮತ್ತ ತೋರುವ ನಿರ್ಲಕ್ಷ್ಯಕ್ಕೆ ತಲೆ ಕೆಡಿಸಿಕೊಳ್ಳದಿರಿ. ನಿಮ್ಮ ಕೆಲಸದತ್ತ ಗಮನಹರಿಸಿ. ಸಮಸ್ಯೆಗಳಿಗೆ ತಕ್ಷಣವೆ ಪರಿಹಾರ ಕಂಡುಕೊಳ್ಳಿ.
ಕಟಕ
ನಿಮ್ಮ ಚಿಂತನೆ, ಕಾರ್ಯಶೈಲಿಗೆ ಇತರರಿಂದ ಮೆಚ್ಚುಗೆ ಸಿಗಲಾರದು. ಇದರಿಂದ ಎದೆಗುಂದಬೇಡಿ. ನಿಮ್ಮ ಕಾರ್ಯ ಅದೇರೀತಿ ಮುಂದುವರಿಸಿ.
ಸಿಂಹ
ಅನಿರೀಕ್ಷಿತ ಧನಲಾಭ. ಆರ್ಥಿಕ ಕೊರತೆ ನೀಗುವುದು. ಅಜೀರ್ಣದಂತಹ ಸಮಸ್ಯೆ ಕಾಡ ಬಹುದು. ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಕನ್ಯಾ
ಪ್ರೀತಿಯ ವಿಷಯದಲ್ಲಿ ಸಂತೋಷದ ಬೆಳವಣಿಗೆ. ಉಲ್ಲಸಿತ. ಇದರಿಂದ ಕೆಲಸದ ಒತ್ತಡ, ಉದ್ವಿಗ್ನತೆ ಮಾಯವಾಗಲಿದೆ. ಆರ್ಥಿಕ ಉನ್ನತಿ.
ತುಲಾ
ದಿನವಿಡೀ ಯಾವುದೋ ವಿಚಾರದಲ್ಲಿ ವ್ಯಸ್ತ ರಾಗುವಿರಿ. ಯಾವುದೇ ವಿಷಯಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಬೇಡಿ. ಬದಲಾವಣೆಗೆ ಸದಾ ಸಿದ್ಧರಾಗಿರಿ.
ವೃಶ್ಚಿಕ
ನಿಮ್ಮ ಕೆಲಸದಲ್ಲಿ ಭಾರೀ ಯಶಸ್ಸು ಸಾಧಿಸುವಿರಿ. ಇದರಿಂದ ಉದ್ಯೋಗದ ಒತ್ತಡ ನಿವಾರಣೆ. ಸಂಜೆ ವೇಳೆಗೆ ಪ್ರೀತಿಪಾತ್ರ ರಿಂದ ಕೊಡುಗೆ. ಮಾನಸಿಕ ನೆಮ್ಮದಿ.
ಧನು
ಕಾರ್ಯಕ್ಷೇತ್ರದಲ್ಲಿ ವಿರೋಧಿಗಳ ಕಡೆಗೊಂದು ಕಣ್ಣಿಡಿ. ಕೆಲಸದಲ್ಲಿ ಜಾಗ್ರತೆ ವಹಿಸಿ. ಕೌಟುಂಬಿಕವಾಗಿ ಸಹಕಾರ ವೃದ್ಧಿ. ಕಾರ್ಯ ಸಂಪೂರ್ಣ.
ಮಕರ
ನೀವಿಂದು ಆರಂಭಿಸುವ ಕಾರ್ಯವು ದೀರ್ಘಾ ವಧಿಯಲ್ಲಿ ಉತ್ತಮ ಫಲ ನೀಡಲಿದೆ. ಹಾಗಾಗಿ ಹಿಂಜರಿಕೆ ಬೇಡ. ಆಪ್ತರ ಸಂಗದಲ್ಲಿ ಒತ್ತಡ ನಿವಾರಣೆ.
ಕುಂಭ
ನೀವು ಇಂದು ವಿಭಿನ್ನ , ವೈರುಧ್ಯ ಭಾವಗಳನ್ನು ಅನುಭವಿಸುತ್ತೀರಿ. ಕೆಲಸದಲ್ಲಿ ಅಧಿಕ ಒತ್ತಡ. ಇನ್ನೊಂದೆಡೆಯಿಂದ ಪ್ರೀತಿಪಾತ್ರರ ಕಾಳಜಿ. ಮಿಶ್ರ ಫಲ.
ಮೀನ
ಅದೃಷ್ಟದ ದಿನ. ಸವಾಲಿನ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಕಷ್ಟಪಟ್ಟರೆ ಫಲ ನಿಶ್ಚಿತ ಎಂಬ ಅರಿವು ನಿಮಗಾಗಲಿದೆ.