ಹಿಂದೂ ಮಹಾಸಭಾ ಸದಸ್ಯನಾಗಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಅಪಾರ ಸಾಧನೆ ಮಾಡಿದ್ದ ಉದ್ಗಾಂವ್ಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಬೆ ಮೂಲಕದ ಡಾ. ಎಂ.ಬಿ.ಉದ್ಗಾಂವ್ಕರ್ ಅವರು ನಾಗರಿಕ ಅಸಹಕಾರ ಚಳವಳಿಯ ನಾಯಕರಾಗಿದ್ದರು. ಹಿಂದೂ ವುಮೆನ್ಸ್ ರೆಸ್ಕ್ಯೂ ಹೋಮ್ ಸೊಸೈಟಿಯ ಕಾರ್ಯದರ್ಶಿಯಾಗಿದ್ದರು ಮತ್ತು ಹಿಂದೂ ಮಹಾಸಭಾದ ಸದಸ್ಯರಾಗಿದ್ದರು. ವಿದೇಶಿ ಬಟ್ಟೆ ಬಹಿಷ್ಕಾರ ಹಾಗೂ ಖಾದಿ ಬಳಕೆಯ ಕುರಿತಾದ ಚಳುವಳಿಯಲ್ಲಿಯೂ ಭಾಗವಹಿಸಿದ್ದರು. ಮಹಾರಾಷ್ಟ್ರ ಪ್ರಾಂತೀಯ ಕಾಂಗ್ರೆಸ್ ಸಮಿತಿ- ಎಂಪಿಸಿಸಿಯಲ್ಲಿ ಪ್ರಮುಖ ಹುದ್ದೆಯನ್ನು ಏರುವುದರ ಮೂಲಕ ಉದ್ಗಾಂವ್ಕರ್ ಅವರು ವೈದ್ಯ ವೃತ್ತಿಯಿಂದ ರಾಜಕೀಯ ನಾಯಕರಾಗಿ ರೂಪಾಂತರಗೊಂಡರು.
ಅವರು ಬಾಂಬೆ ನಗರದ ಮಾಟುಂಗಾದಲ್ಲಿ ಕಾರ್ಮಿಕ ಶಿಬಿರಗಳಿಗೆ ಸಂಪರ್ಕವನ್ನು ಪಡೆದರು. ಭಾಷಣಕಾರರಾಗಿ ಮತ್ತು ಎಂಪಿಸಿಸಿಯ ನಾಯಕರಲ್ಲಿ ಒಬ್ಬರಾಗಿ, ರಾಷ್ಟ್ರವಿರೋಧಿ ಪತ್ರಿಕೆಗಳ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಲೀಲಾವತಿ ಮುನ್ಷಿ ಅವರು ಕೈಗೊಂಡ ನಿರ್ಣಯದ ಸಮಯದಲ್ಲಿ ಭಾಗವಹಿಸಿದ್ದ ಪ್ರೆಮುಖರಲ್ಲಿ ಒಬ್ಬರು. ಕಾರ್ಮಿಕ ಚಳವಳಿಯೊಂದಿಗಿನ ಅವರ ಪಾಲ್ಗೊಳ್ಳುವಿಕೆ ಅವರನ್ನು ಒಂದು ಸ್ಪಷ್ಟ ಪ್ರತಿಭಟನಾಕಾರನನ್ನಾಗಿ ಮಾಡಿತು. 1930 ರಲ್ಲಿ ಅವರು ಮಾಟುಂಗಾದ ಕಾರ್ಮಿಕ ಶಿಬಿರಗಳಲ್ಲಿ ಸುಮಾರು 40 ಕಾರ್ಮಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ತಮ್ಮ ಭಾಷಣಗಳಲ್ಲಿ ಅವರು ಬಡತನಕ್ಕೆ ಬ್ರಿಟಿಷ್ ಸರ್ಕಾರವನ್ನು ದೂಷಿಸಿದರು ಮತ್ತು ಕಾರ್ಮಿಕ ವರ್ಗದ ಕೊರತೆಯನ್ನು ಎತ್ತಿ ತೋರಿಸಿದರು.
ಅವರು ತಮ್ಮ ಸುದೀರ್ಘ ಪ್ರಭಾವವನ್ನು ಜನರ ಮೇಲೆ, ವಿಶೇಷವಾಗಿ ಕಾರ್ಮಿಕರು ನಾಗರಿಕ ಅಸಹಕಾರ ಅಭಿಯಾನಕ್ಕೆ ಸೇರಲು, ವಿದೇಶಿ ಬಟ್ಟೆ ಬಹಿಷ್ಕರಿಸಲು, ಖದ್ದರ್ ಬಳಸಲು ಮತ್ತು ಕುಡಿತವನ್ನು ತ್ಯಜಿಸಲು ಒತ್ತಾಯಿಸಿದರು. 1930 ರಲ್ಲಿ ಡಾ. ಉದ್ಗಾಂವ್ಕರ್ ಅವರ ನೇತೃತ್ವದಲ್ಲಿ ಮಾಟುಂಗಾದ ಕಿಂಗ್ಸ್ ಸರ್ಕಲ್‌ನಿಂದ ಸಿಯಾನ್‌ವರೆಗೆ ನಡೆದ ಮೆರವಣಿಗೆಯಲ್ಲಿ, ಡಾ. ಉದ್ಗಾಂವ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲು ಜನರಿಗೆ ಸಲಹೆ ನೀಡಿದರು. ನಾಗರಿಕ ಅಸಹಕಾರ ಚಳವಳಿಯಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹಳ್ಳಿಗಳಲ್ಲಿ ಕಾಂಗ್ರೆಸ್ ಸಮಿತಿಗಳ ರಚನೆಯ ಕಲ್ಪನೆಯನ್ನು ಅವರು ಪ್ರಕಟಿಸಿದರು. ಹಿಂದೂ ವುಮೆನ್ಸ್ ರೆಸ್ಕ್ಯೂ ಹೋಮ್ ಸೊಸೈಟಿಯ ಕಾರ್ಯದರ್ಶಿಯಾಗಿ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿ ಎಂ ಬಿ ಉದ್ಗಾಂವ್ಕರ್ ಅವರ ಸಾಧನೆಗಳು ಅಪಾರವಾಗಿವೆ. ಕಾರ್ಮಿಕ ಪ್ರದೇಶಗಳಲ್ಲಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಾಮರಸ್ಯವನ್ನು ತರುವುದರಲ್ಲಿ ಅವರು ಶ್ಲಾಘನೀಯ ಸಾಧನೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!