ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಸಾರಿ ಏಳು ತಿಂಗಳು ಕಳೆದಿದೆ. ಕೆಲ ದಿನಗಳಿಂದ ರಷ್ಯಾ ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸುತ್ತದೆ. ಒಂದೆಡೆ ಉಕ್ರೇನ್ ನಿಂದ ವಶಕ್ಕೆ ಪಡೆದಿರುವ ಪ್ರದೇಶಗಳನ್ನು ದೇಶದೊಳಕಗೆ ವಿಲೀನಗೊಳಿಸಲು ಮುಂದಾಗಿರುವ ರಷ್ಯಾ, ಒಂದುವೇಳೆ ದೇಶದ ಭದ್ರತೆಗೆ ಬೆದರಿಕೆ ಉಂಟಾದರೆ ಅಣ್ವಸ್ತ್ರ ವನ್ನು ಬಳಸಲು ಹಿಂದೇಟು ಹಾಕುವುದಿಲ್ಲ ಎಂದು ಮತ್ತೊಮ್ಮೆ ಬೆದರಿಕೆ ಒಡ್ಡಿದೆ.
ಏತನ್ಮಧ್ಯೆ, ಹೊಸದಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಸೇರಿದಂತೆ ತನ್ನ ಭೂಪ್ರದೇಶವನ್ನು ರಕ್ಷಿಸಿಕೊಳ್ಳಲು ಅಗತ್ಯಬಿದ್ದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ನಾವು ಸಿದ್ಧರಿದ್ದೇವೆ. ಜಗತ್ತು ನಮ್ಮ ಹೇಳಿಕೆಯನ್ನು ಲಘುವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ರಷ್ಯಾ ವಕ್ತಾರ ಡಿಮಿಟ್ರಿ ಪೆಸ್ಕೋವ್ ಎಚ್ಚರಿಕೆ ನೀಡಿದ್ದಾರೆ.
ನಮಗೆ ಬೆದರಿಕೆ ಮಿತಿಮೀರಿದರೆ, ಯಾರ ಒಪ್ಪಿಗೆಯನ್ನೂ ಪಡೆಯದೆ ನಾವು ಅಣ್ವಸ್ತ್ರಗಳ ಮೂಲಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.
ಉಕ್ರೇನಿಯನ್ನರು ತಮ್ಮ ಪ್ರದೇಶಗಳನ್ನು ಪುನಃ ವಶಪಡಿಸಿಕೊಳ್ಳುವ ಪ್ರತಿದಾಳಿಯನ್ನು ಪ್ರಾರಂಭಿಸಿದಾಗಿನಿಂದ ಮಾಸ್ಕೋದ ಪರಮಾಣು ಆಯ್ಕೆಯ ಬಗ್ಗೆ ಪುಟಿನ್ ಸರ್ಕಾರ ಹಲವಾರು ಬಾರಿ ಎಚ್ಚರಿಸಿದೆ.
ಅಮೆರಿಕವು ರಷ್ಯಾ ಪರಮಾಣು ಎಚ್ಚರಿಕೆಯನ್ನು ಹೆದರಿಸುವ ತಂತ್ರವೆಂದು ತಳ್ಳಿಹಾಕಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ