ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೆಜೆಂಡರಿ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರನ್ನು ಇಡಲಾಗಿರುವ ಅಯೋಧ್ಯೆಯ ವೃತ್ತವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಈ ಮೂಲಕ ಲತಾ ಮಂಗೇಶ್ಕರ್ ಅವರ 93ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಶ್ರದ್ಧಾಂಜಲಿ ಕೋರಿದ್ದಾರೆ.
40 ಅಡಿಯ ವೀಣೆ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿ ಗೌರವ ಸೂಚಿಸಿದ್ದಾರೆ. ಲತಾ ಅವರು ತಮ್ಮ ಕಂಠದಿಂದ ಮಂತ್ರಮುಗ್ಧಗೊಳಿಸುತ್ತಿದ್ದರು. ಸಹೋದರಿ ಲತಾ ಹೆಸರು ಎಲ್ಲೆಡೆ ಕೇಳುತ್ತಿದೆ. ಅವರ ಧ್ವನಿ ಸದಾ ಹೆಸರುವಾಸಿ ಎಂದಿದ್ದಾರೆ. ಅವರ ಜೊತೆ ಕಳೆದ ಸಮಯ ನೆನೆದಾಗಲೆಲ್ಲ, ದೇಶಕ್ಕೆ ಇನ್ನಷ್ಟು ಒಳಿತು ಮಾಡಬೇಕು ಎನ್ನುವ ಸ್ಫೂರ್ತಿ ನನ್ನಲ್ಲಿ ಹೆಚ್ಚುತ್ತದೆ ಎಂದಿದ್ದಾರೆ. ಲತಾ ಅವರ ಹೆಸರಿನಲ್ಲಿ ಚೌಕವೊಂದು ಇರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.
ಅಂದಾಜು 7.9 ಕೋಟಿ ರೂ. ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, 14 ಟನ್ ತೂಕ,40 ಅಡಿ ಎತ್ತರದ ವೀಣೆ ಸ್ಥಾಪನೆಯಾಗಿದೆ. ವೀಣೆಯ ಮಧ್ಯಭಾಗದಲ್ಲಿ ಸರಸ್ವತಿ ದೇವರ ಆಕೃತಿ ಕೆತ್ತಲಾಗಿದೆ.