ನಿಮ್ಮ ಮಕ್ಕಳು ಬೇಗ ನಿದ್ರೆ ಮಾಡ್ತಿಲ್ವಾ..?ಈ ಟಿಪ್ಸ್‌ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿದ್ರೆ ಮಾನವನ ಆರೋಗ್ಯಕ್ಕೆ ಬಹಳ ಮುಖ್ಯ. ಒಬ್ಬ ಮನುಷ್ಯ ದಿನಕ್ಕೆ 6ರಿಂದ 8 ಗಂಟೆಗಳ ಕಾಲ ನಿದ್ರಿಸಬೇಕಾಗುತ್ತದೆ. ಅದರಲ್ಲೂ ಚಿಕ್ಕಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ಯಾಕಂದ್ರೆ ಚಿಕ್ಕ ಮಕ್ಕಳು ಬೇಗ ನಿದ್ದೆ ಮಾಡದೆ, ಆಟವಾಡುತ್ತಾ, ನಿದ್ದೆ ಸಮಯದಲ್ಲಿ ಮಧ್ಯ ಮಧ್ಯೆ ಏಳುವುದು, ಇದೆಲ್ಲಾ ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮಕ್ಕಳ ಬೆಳವಣಿಗೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ನಿದ್ರೆ ಕೂಡ ಒಂದು. 5 ವರ್ಷಕ್ಕಿಂತ ಪುಟ್ಟ ಮಕ್ಕಳು ಒಂದು ದಿನಕ್ಕೆ 13 ಗಂಟೆಗಳವರೆಗೆ ನಿದ್ರಿಸಬೇಕೆಂಬುದು ಪಾಲಕರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ.

ಮಕ್ಕಳು ನಿದ್ರೆ ಮಾಡಲು ಟಿಪ್ಸ್‌

  • ಪೋಷಕರು ಹೆಚ್ಚು ಸಮಯ ಎಚ್ಚರವಾಗಿದ್ದರೆ ಆ ಪರಿಣಾಮ ಮಕ್ಕಳ ಮೇಲೆ ಬೀರುತ್ತದೆ.
  • ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ನಿದ್ರೆಗೆ ಬ್ರೇಕ್‌ ಹಾಕುತ್ತವೆ. ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ.
  • ಮಕ್ಕಳೊಂದಿಗೇ ಪೋಷಕರು ಮಲಗುವುದು ಉತ್ತಮ. ಇದು ನಿದ್ರೆಯ ಸಮಯವನ್ನು ಹೆಚ್ಚಿಸಬಹುದು.
  • ಮಕ್ಕಳು ಮಲಗುವ ಮುನ್ನ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ, ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು.
  • ಮಲಗುವ ಮುನ್ನ ಟಿವಿ ನೋಡುವುದು, ಸಾಮಾಜಿಕ ಜಾಲತಾಣಗಳನ್ನು ಬಳಸುವುದು, ವಿಡಿಯೋಗೇಮ್‌ಗಳು ಇತ್ಯಾದಿಗಳನ್ನು ಮಾಡಬಾರದು.
  • ಶಾಂತ, ನಿಶ್ಶಬ್ದ ವಾತಾವರಣವಿದ್ದರೆ ಚೆನ್ನಾಗಿ ನಿದ್ದೆ ಬರುತ್ತದೆ.
  • ಮಲಗುವ ಸ್ಥಳವನ್ನು ಗೊಂದಲವಿಲ್ಲದೆ ಇಡುವುದು ಉತ್ತಮ ಜೊತೆಗೆ ಮನೆ ಪೂರ್ತಿ ಕತ್ತಲೆಯಿಂದಲ್ಲದೆ ಒಂದು ಸಣ್ಣ ಬೆಡ್ ಲೈಟ್ ಇದ್ದರೆ ಒಳ್ಳೆಯದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!